ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: 217 ಮಂದಿಗೆ ಕೋವಿಡ್‌ ಸೋಂಕು

ಮೃತ ಸೋಂಕಿತರ ಸಂಖ್ಯೆ 50ಕ್ಕೇರಿಕೆ: 1,991 ಮಾದರಿ ಸಂಗ್ರಹ
Last Updated 6 ಆಗಸ್ಟ್ 2020, 15:32 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಗುರುವಾರ 6 ಕೋವಿಡ್‌ ಸೋಂಕಿತರು ಮೃತಪಟ್ಟಿದ್ದು, 217 ಜನರಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದೆ.ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 93 ಮಂದಿಗೆ, ಐಎಲ್‌ಐ ರೋಗ ಲಕ್ಷಣಗಳಿದ್ದ 62, ಸಾರಿ ಲಕ್ಷಣಗಳಿದ್ದ 9, ಹೊರ ಜಿಲ್ಲೆಗಳ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. 51 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.‌

85 ಸೋಂಕಿತರಿಗೆ ರೋಗದ ಲಕ್ಷಣಗಳಿದ್ದರೆ, 132 ಜನರಿಗೆ ಲಕ್ಷಣಗಳು ಕಂಡುಬಂದಿಲ್ಲ. ಸೋಂಕಿತರಲ್ಲಿ ಉಡುಪಿಯ 90, ಕುಂದಾಪುರದ 81, ಕಾರ್ಕಳದ 44 ಮಂದಿ ಇದ್ದಾರೆ. 12 ಸೋಂಕಿತರನ್ನು ಕೋವಿಡ್‌ ಕೇರ್ ಕೇಂದ್ರಗಳಲ್ಲಿ, 79 ಮಂದಿ ಹೋಂ ಐಸೊಲೇಷನ್ ಹಾಗೂ 126 ಮಂದಿಗೆ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

1991 ಮಾದರಿ ಸಂಗ್ರಹ:ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಾಗೂ ರೋಗದ ಲಕ್ಷಣಗಳಿದ್ದ 1,991 ಜನರ ಮಾದರಿ ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. 1,229 ವರದಿಗಳು ಬರುವುದು ಬಾಕಿ ಇದೆ.

ಗುರುವಾರ 85 ಸೇರಿದಂತೆ ಇದುವರೆಗೂ 3,157 ಸೋಂಕಿತರುಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 2,153 ಸಕ್ರಿಯ ಪ್ರಕರಣಗಳು ಇವೆ. 1396 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 5,353ಕ್ಕೇರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT