ಸೋಮವಾರ, ಜನವರಿ 25, 2021
25 °C

ಉಡುಪಿ: ಕೋವಿಡ್‌ಗೆ ಕಾರ್ಕಳದ ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಸೋಮವಾರ ಕೋವಿಡ್‌ಗೆ ಒಬ್ಬರು ಮೃತಪಟ್ಟಿದ್ದು, 9 ಜನರಲ್ಲಿ ಸೋಂಕು ದೃಢಪಟ್ಟಿದೆ. ಕಾರ್ಕಳದ 59 ವರ್ಷದ ಮಹಿಳೆ ಮೃತಪಟ್ಟವರು. ಗಂಭೀರ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಮಹಿಳೆಗೆ ಸೋಂಕು ತಗುಲಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.

9 ಸೋಂಕಿತರಲ್ಲಿ ಉಡುಪಿಯ 7, ಕುಂದಾಪುರ ಹಾಗೂ ಕಾರ್ಕಳದ ತಲಾ ಒಬ್ಬರು ಸೇರಿದ್ದು, ಕೋವಿಡ್‌ ಆಸ್ಪತ್ರೆಯಲ್ಲಿ ಒಬ್ಬರಿಗೆ, 8 ಜನರಿಗೆ ಹೋಂ ಐಸೊಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣ ಸಂಖ್ಯೆ 23,113 ಇದ್ದು, ಸಕ್ರಿಯ ಸೋಂಕಿತರು 90 ಮಂದಿ ಇದ್ದಾರೆ. 22,834 ಸೋಂಕಿತರು ಗುಣಮುಖರಾಗಿದ್ದಾರೆ. 189 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಒಟ್ಟು ಸೋಂಕಿತರು– 23,113

ಸೋಮವಾರ ದೃಢಪಟ್ಟ ಪ್ರಕರಣ–9

ಸಕ್ರಿಯ ಪ್ರಕರಣಗಳು–90

ಗುಣಮುಖರಾದವರು–22,834

ಸೋಮವಾರ ಗುಣಮುಖರಾದವರು–14

ಒಟ್ಟು ಮೃತಪಟ್ಟವರು–189

ಸೋಮವಾರ ಮೃತಪಟ್ಟವರು–1

ಐಸಿಯುನಲ್ಲಿರುವವರು–4

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.