ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

174 ಮಂದಿಗೆ ಕೋವಿಡ್‌ ಸೋಂಕು; ಒಬ್ಬರು ಸಾವು

Last Updated 13 ಅಕ್ಟೋಬರ್ 2020, 15:10 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್‌ ಸೋಂಕಿತ ವೃದ್ಧರೊಬ್ಬರು ಮೃತಪಟ್ಟಿದ್ದು, 174 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ ಉಡುಪಿಯ 68, ಕುಂದಾಪುರದ 40, ಕಾರ್ಕಳದ 58, ಬೇರೆ ಜಿಲ್ಲೆಗಳ 8 ಜನ ಇದ್ದಾರೆ.

ಕೋವಿಡ್ ಆಸ್ಪತ್ರೆಗಳಲ್ಲಿ 10, ಹೋಂ ಐಸೊಲೇಷನ್‌ನಲ್ಲಿ 164 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 77 ಮಹಿಳೆಯರು ಹಾಗೂ 97 ಪುರುಷರಿಗೆ ಸೋಂಕು ತಗುಲಿದ್ದು, 63 ಮಂದಿಗೆ ರೋಗದ ಲಕ್ಷಣಗಳಿದ್ದರೆ 111 ಸೋಂಕಿತರಿಗೆ ಲಕ್ಷಣಗಳು ಕಂಡುಬಂದಿಲ್ಲ.

186 ರೋಗಿಗಳು ಗುಣಮುಖರಾಗಿದ್ದು, ಇದುವರೆಗೂ ಗುಣರಾದವರ ಸಂಖ್ಯೆ 17,738ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 19,922 ಇದ್ದು, ಸಕ್ರಿಯ ಸೋಂಕಿತರು 1,994 ಇದ್ದಾರೆ. 168 ಸೋಂಕಿತರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT