ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ ಜಿಲ್ಲಾ ಕಳ್ಳನ ಬಂಧನ

Last Updated 13 ಅಕ್ಟೋಬರ್ 2021, 15:18 IST
ಅಕ್ಷರ ಗಾತ್ರ

ಉಡುಪಿ: ಅಂತರ ಜಿಲ್ಲಾ ಕಳ್ಳನನ್ನು ಬಂಧಿಸಿರುವ ಪೊಲೀಸರು ಎರಡು ಬೈಕ್, ಎರಡು ಮೊಬೈಲ್ ಹಾಗೂ ₹ 4.32 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಕಾರ್ಕಳ ತಾಲ್ಲೂಕಿನ ನಿಟ್ಟೆ ಅತ್ತೂರು ನಿವಾಸಿ ಸುರೇಶ್ ಪೂಜಾರಿ (49) ಆರೋಪಿ. ಬಂಧಿತನ ವಿರುದ್ಧ ಶಿರ್ವ, ಹಿರಿಯಡ್ಕ ಕಾರ್ಕಳ ನಗರ, ಪಡುಬಿದ್ರಿ, ಮೂಲ್ಕಿ, ದಾವಣಗೆರೆ, ಬೆಳಗಾವಿ, ಉಡುಪಿ ನಗರ, ಮಲ್ಪೆ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಸೆ.23ರಂದು ಬನ್ನಂಜೆಯಲ್ಲಿರುವ ಮಂಜುನಾಥ ಕಣ್ಣಿನ ಆಸ್ಪತ್ರೆಯ ಷಟರ್‌ ಬೀಗ ಮುರಿದು, ಡ್ರಾವರ್‌ನಲ್ಲಿದ್ದ ₹ 4,74,500 ಕಳವು ಮಾಡಲಾಗಿತ್ತು. ಸಿಸಿಟಿವಿ ಕ್ಯಾಮೆರಾ ಡಿವಿಆರ್‌ ಅನ್ನು ಕೂಡ ಹೊತ್ತೊಯ್ಯಲಾಗಿತ್ತು. ಈ ಪ್ರಕರಣದಲ್ಲಿ ಆಸ್ಪತ್ರೆಯ ಆಸುಪಾಸಿನ ಕಟ್ಟಡ, ಮನೆ , ಅಂಗಡಿಗಳಲ್ಲಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ ಪೊಲೀಸರು, ಸೋಮವಾರ ಉಡುಪಿಯ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಆರೋಪಿ ಸುರೇಶ್‌ ಪೂಜಾರಿಯನ್ನು ಬಂಧಿಸಿದ್ದರು.

ವಿಜಾರಣೆ ವೇಳೆ ಉಡುಪಿ ಮತ್ತು ಮಲ್ಪೆ ಸೊಸೈಟಿಯಲ್ಲಿ ಕಳವು ಹಾಗೂ ಉಡುಪಿಯ ಗರಡಿ ರಸ್ತೆಯಲ್ಲಿ ಬೈಕ್ ಕಳವು ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆತನಿಂದ ₹ 4.33 ಲಕ್ಷ, 2 ಬೈಕ್ ಹಾಗೂ 2 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಉಡುಪಿ ನಗರ ಠಾಣೆಯ ಇನ್‌ಸ್ಪೆಕ್ಟರ್ ಪ್ರಮೋದ ಕುಮಾರ್, ಪಿಎಸ್‌ಐ ಸುಹಾಸ್‌, ಪ್ರಸಾದ್‌ ಕುಮಾರ್‌, ಎಎಸ್‌ಐ ಜಯಕರ, ಅರುಣ್‌, ಲೋಕೇಶ್‌, ಸಂತೋಷ ರಾಠೋಡ್, ಬಾಲಕೃಷ್ಣ, ರಿಯಾಜ್‌ ಅಹಮ್ಮದ್‌, ರಾಜೇಶ್‌, ದೇವರಾಜ್‌, ಕಿರಣ್, ಚೇತನ್‌, ಆನಂದ ಗಾಣಿಗ, ವಿಶ್ವನಾಥ ಶೆಟ್ಟಿ, ಹೇಮಂತ್‌, ಕಾರ್ತಿಕ್‌, ಲಿಂಗರಾಜು, ರಾಕೇಶ್‌ ಪಾಲ್ಗೊಂಡಿದ್ದರು.

ಕಳವು: ಮೂರು ವರ್ಷ ಜೈಲು

ಉಡುಪಿ: ನಾಲ್ಕು ವರ್ಷಗಳ ಹಿಂದೆ ಕಲ್ಸಂಗದ ಲೇಬರ್ ಬರ್ಕ್ ಕಚೇರಿಯಲ್ಲಿ ಕಳವು ಮಾಡಿದ್ದ ಬಾಗಲಕೋಟೆ ಮೂಲದ ನಿಂಗಪ್ಪ ಛಲವಾದಿ ಎಂಬಾತನಿಗೆ ಒಂದನೇ ಹೆಚ್ಚುವರಿ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಹಾಗೂ 20,000 ದಂಡ ವಿಧಿಸಿದೆ.

ಮೇ, 3, 2017ರಲ್ಲಿ ಕೆ.ಸುರೇಶ್ ರಾವ್ ಎಂಬುವರ ಕಚೇರಿಯಲ್ಲಿ ಟಿವಿ, ಕಂಪ್ಯೂಟರ್ ಮಾನಿಟರ್, ಸಿಪಿಯು, ಹಳೆಯ ಮೂರು ಮೊಬೈಲ್‌ಗಳು ಹಾಗೂ ₹ 580 ನಗದು ಕಳವು ಮಾಡಲಾಗಿತ್ತು. ಅಂದಿನ ಉಡುಪಿ ಇನ್‌ಸ್ಪೆಕ್ಟರ್ ನವೀನ್‌ಚಂದ್ರ ಜೋಗಿ ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಆರೋಪಿಯ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶ್ಯಾಮ್‌ ಪ್ರಕಾಶ್‌ ಶಿಕ್ಷೆ ಹಾಗೂ ದಂಡ ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಕೆ.ಮೋಹಿನಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT