ಮಂಗಳವಾರ, ಅಕ್ಟೋಬರ್ 27, 2020
20 °C

₹ 12 ಲಕ್ಷದ ಆಸೆಗೆ ₹ 26 ಲಕ್ಷ ಕಳೆದುಕೊಂಡರು‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈಚೆಗೆ ನ್ಯಾಪ್‌ಟಾಲ್ ಕಂಪೆನಿ ಹೆಸರಿನಲ್ಲಿ ವಂಚಕರು ಕೆ.ನಾಗರಾಜ ಭಟ್‌ ಅವರಿಗೆ ₹ 26,47,650 ವಂಚಿಸಿದ್ದಾರೆ.

ವಂಚನೆ ನಡೆದಿದ್ದು ಹೇಗೆ?

ಮಾರ್ಚ್‌ 29, 2019ರಲ್ಲಿ ನಾಗರಾಜ್‌ ಭಟ್‌ ಅವರ ವಿಳಾಸಕ್ಕೆ ನ್ಯಾಪ್‌ಟಾಲ್‌ ಕಂಪೆನಿಯ ಹೆಸರಿನಲ್ಲಿ ಸ್ಕ್ರಾಚ್‌ ಕೂಪನ್ ಬಂದಿತ್ತು. ಅದರಲ್ಲಿ ₹ 12 ಲಕ್ಷ ಬಹುಮಾನ ಗೆದ್ದಿರುವುದಾಗಿ ತಿಳಿಸಲಾಗಿತ್ತು. ಬಳಿಕ ನಾಗರಾಜ್ ಭಟ್‌ ಪತ್ರದಲ್ಲಿದ್ದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದಾಗ, ಬಹುಮಾನದ ಹಣ ಪಡೆಯಬೇಕಾದರೆ ನೋಂದಣಿ ಶುಲ್ಕ ಪಾವತಿಸುವಂತೆ ತಿಳಿಸಿದ ವಂಚಕರು ₹ 12,000 ನಗದನ್ನು ಖಾತೆಗೆ ಹಾಕಿಸಿಕೊಂಡಿದ್ದರು.

ಬಳಿಕ ಆರೋಪಿಗಳಾದ ಅಮಿತ್ ಬಿಸ್ವಾಸ್‌, ಚೇತನ್ ಕುಮಾರ್ ಬೇರೆ ಬೇರೆ ಮೊಬೈಲ್ ನಂಬರ್‌ಗಳಿಂದ ಕರೆಮಾಡಿ ಜಿಎಸ್‌ಟಿ, ತೆರಿಗೆ, ಪರಿಷ್ಕರಣ ಶುಲ್ಕ ಹೀಗೆ ಏ.4, 2019ರಿಂದ ಇಲ್ಲಿಯವರೆಗೂ ವಿವಿಧ ಬ್ಯಾಂಕ್ ಖಾತೆಗಳಿಗೆ ₹ 26,47,650 ಜಮೆ ಮಾಡಿಸಿಕೊಂಡಿದ್ದಾರೆ. ಕೊನೆಗೆ, ನಾಗರಾಜ್ ಭಟ್‌ ಅವರಿಗೆ ಮೋಸ ಹೋಗಿರುವುದು ಅರಿವಾಗಿ ಸೆನ್ ಠಾಣೆಗೆ ದೂರು ನೀಡಿದ್ದಾರೆ. ವಂಚಕರ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು