ಮಂಗಳವಾರ, ಜನವರಿ 31, 2023
19 °C

ಕೃಷ್ಣಮಠದಿಂದ ಕಡಿಯಾಳಿ ದೇವಸ್ಥಾನಕ್ಕೆ ಬಂದ ಫೌಂಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ವಿಜಯ ದಶಮಿಯ ಪರ್ವಕಾಲದಲ್ಲಿ ಕೃಷ್ಣಮಠದಿಂದ ವಾರ್ಷಿಕ ಫೌಂಜಿಯು ಕಡಿಯಾಳಿ ದೇವಸ್ಥಾನಕ್ಕೆ ಭೇಟಿ ನೀಡಿತು.

ಮಠದ ಪರವಾಗಿ ಮೆರವಣಿಗೆಯಲ್ಲಿ ಬಂದಿದ್ದ ವಿದ್ವಾಂಸರನ್ನು ‌‌ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಡಾ.ಕಟ್ಟೆ ರವಿರಾಜ ವಿ.ಆಚಾರ್ಯ ನೇತೃತ್ವದಲ್ಲಿ ಸಮಿತಿಯ ಸದಸ್ಯರು, ರಾಧಾಕೃಷ್ಣ ಉಪಾಧ್ಯಾಯ ನೇತೃತ್ವದ ಅರ್ಚಕರು  ಆತ್ಮೀಯವಾಗಿ ಬರಮಾಡಿಕೊಂಡರು.

ಸಾಂಪ್ರದಾಯಿಕ ಶಿಷ್ಟಾಚಾರಗಳೊಂದಿಗೆ ಆತಿಥ್ಯ ನೀಡಲಾಯಿತು. ಶ್ರೀರಂಗ ಉಪಾಧ್ಯಾಯರು ದೇವಸ್ಥಾನದ ಆವರಣದಲ್ಲಿ ಶಮಿ ವೃಕ್ಷ ಪೂಜೆ ನೆರವೇರಿಸಿದರು. ಶಮೀವೃಕ್ಷ ಪೂಜೆಯ ಬಳಿಕ ದೇವಿಯ ದರ್ಶನ ಪಡೆಯಲಾಯಿತು.

ಮಠದ ವಿದ್ವಾಂಸರಾದ ಶ್ರೀನಿವಾಸ ಉಪಾಧ್ಯ, ಗೋಪಾಲಕೃಷ್ಣ ಉಪಾಧ್ಯ, ರಘುರಾಮ ಬಲ್ಲಾಳ್, ಜನಾರ್ದನ ಮೇಳಂತ ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು