ಮಂಗಳವಾರ, ಮಾರ್ಚ್ 21, 2023
20 °C

ಉಪ ಕಲಾತ್ಮಕ ನಿರ್ದೇಶಕರಾಗಿ ಪ್ರದೀಪ ಕುಮಾರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೈಂದೂರು: 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉಪ ಕಲಾತ್ಮಕ ನಿರ್ದೇಶಕರನ್ನಾಗಿ (ಡೆಪ್ಯುಟಿ ಆರ್ಟಿಸ್ಟಿಕ್ ಡೈರೆಕ್ಟರ್) ಡಾ. ಪ್ರದೀಪ ಕುಮಾರ ಶೆಟ್ಟಿ ಕೆಂಚನೂರು ಇವರನ್ನು ಕರ್ನಾಟಕ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ.

ವಾರ್ತಾ ಇಲಾಖೆಯಡಿಯಲ್ಲಿ ಬರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಈ ಉತ್ಸವವನ್ನು ಮಾರ್ಚ್ 16ರಿಂದ 23ರ ವರೆಗೆ ಬೆಂಗಳೂರಿನ ಒರಾಯನ್ ಮಾಲ್‍ನಲ್ಲಿರುವ ಪಿ.ವಿ.ಆರ್‌.ನಲ್ಲಿ ಸಂಘಟಿಸಲಿದೆ. ಪ್ಯಾರಿಸ್‍ನಲ್ಲಿರುವ ಎಫ್‌ಐಎಪಿ ಸಂಸ್ಥೆ ಮನ್ನಣೆ ನೀಡಿರುವ ಈ ಚಲನಚಿತ್ರೋತ್ಸವವು ಅಂತರರಾಷ್ಟ್ರೀಯ ಮನ್ನಣೆ ಪಡೆದಿರುವ ಕೆಲವೇ ಕೆಲವು ಮುಖ್ಯ ಉತ್ಸವಗಳಲ್ಲಿ ಒಂದಾಗಿದೆ.

ಪುಣೆಯ ಎಫ್‌ಟಿಐಐನಲ್ಲಿ (ಫಿಲಂ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್) ಅಪ್ರಿಸಿಯೇಷನ್ ಮತ್ತು ಕೊಲ್ಕತ್ತಾದ ಸತ್ಯಜಿತ್ ರೇ ಫಿಲಂ ಇನ್‌ಸ್ಟಿಟ್ಯೂಟ್‌ನಿಂದ ಸೌಂಡ್ ಅಥವಾ ಶಬ್ದಗ್ರಹಣದಲ್ಲಿ ಪ್ರದೀಪ್ ಅವರು ತರಬೇತಿ ಹೊಂದಿದ್ದಾರೆ. ವಿಶ್ವ ಸಿನಿಮಾ, ಭಾರತೀಯ ಸಿನಿಮಾ ಮತ್ತು ಕನ್ನಡ ಸಿನಿಮಾ ಕುರಿತಂತೆ ಒಟ್ಟು ಆರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2016ರಲ್ಲಿ ರಾಷ್ಟ್ರಪತಿಗಳ ಬೆಳ್ಳಿ ಪದಕ ಪ್ರಶಸ್ತಿ ಪಡೆದ ಗುಲ್ವಾಡಿ ಟಾಕೀಸ್ ನಿರ್ಮಾಣದ ‘ರಿಸರ್ವೇಶನ್‌’ ಸಿನಿಮಾದ ಚಿತ್ರಕಥೆಯ ಲೇಖಕರಾಗಿದ್ದಾರೆ. ನಿಟ್ಟೆ ವಿಶ್ವವಿದ್ಯಾಲಯದ ಫಿಲ್ಮ್ ಫೆಸ್ಟಿವಲ್ ಪ್ರೋಗ್ರಾಮರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.