ಪಾದಚಾರಿಗಳಿಗೆ ಕಾರ್ಕಳ ನಗರದ ಕೆಲವು ರಸ್ತೆಗಳಲ್ಲಿ ನಡೆದಾಡಲು ಸಮಸ್ಯೆಯಾಗುತ್ತಿದೆ. ರಿಕ್ಷಾದಲ್ಲಿ ಬಾಡಿಗೆಗೆ ತೆರಳಲೂ ಸಾಧ್ಯವಾಗದ ಪರಿಸ್ಥಿತಿ ಇದೆ. ಸಂಬಂಧಪಟ್ಟವರು ಗಮನ ಹರಿಸಬೇಕು
ಸತೀಶ್ ರಿಕ್ಷಾ ಚಾಲಕ
‘ಹೂಳು ತುಂಬಿದ ಚರಂಡಿ’
ಕಾರ್ಕಳ ನಗರದ ಚರಂಡಿಗಳ ಹೂಳೆತ್ತಿ ಸ್ವಚ್ಛಗೊಳಿಸದಿರುವುದರಿಂದ ಮಳೆ ಬರುವಾಗ ನೀರು ರಸ್ತೆಗಳಲ್ಲೇ ಹರಿದು ರಸ್ತೆಗಳು ಹದಗೆಡುತ್ತಿವೆ. ಬಂಡಿಮಠ ಬಸ್ ನಿಲ್ದಾಣದ ಬಳಿಯ ದೇವಸ್ಥಾನದ ಎದುರು ಮ್ಯಾನ್ ಹೋಲ್‌ನಿಂದ ಚರಂಡಿ ತ್ಯಾಜ್ಯವು ಉಕ್ಕಿ ರಸ್ತೆಯ ಮೇಲೆ ಹರಿದು ರಸ್ತೆಯ ಮೇಲೆ ಸಾಗುವ ವಾಹನಗಳ ರಭಸಕ್ಕೆ ಜನರ ಮೈಮೇಲೆ ಸಿಡಿಯುತ್ತಿದೆ. ಪುರಸಭೆ ವತಿಯಿಂದ ಈಚೆಗೆ ತ್ಯಾಜ್ಯ ಸ್ವಚ್ಛಗೊಳಿಸಿದರೂ ಜೋರಾಗಿ ಮಳೆ ಸುರಿದರೆ ಮ್ಯಾನ್ ಹೋಲ್‌ನಿಂದ ಕೊಳಚೆ ನೀರು ಹೊರ ಬರುತ್ತದೆ.