ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಡಿ-ಗಂಗೊಳ್ಳಿ ಅಳಿವೆಯಲ್ಲಿ ಡಾಲ್ಫಿನ್ ಚೆಲ್ಲಾಟ

Last Updated 3 ಆಗಸ್ಟ್ 2020, 15:55 IST
ಅಕ್ಷರ ಗಾತ್ರ

ಕುಂದಾಪುರ: ಕೆಲವು ದಿನಗಳಿಂದ ಕೋಡಿ-ಗಂಗೊಳ್ಳಿಯ ಸೀವಾಕ್ ಪ್ರದೇಶದಲ್ಲಿ ಡಾಲ್ಫಿನ್ ಕಾಣಿಸಿಕೊಳ್ಳುತ್ತಿದ್ದು, ವೀಕ್ಷಣೆಗೆ ವಿಹಾರಾರ್ಥಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ.

ಆಳ ಸಮುದ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅಪರೂಪದ ಡಾಲ್ಫಿನ್ ಮೀನುಗಳು ಕಳೆದ ಕೆಲವು ದಿನಗಳಿಂದ ಕಾಣಿಸಿಕೊಳ್ಳುತ್ತಿರುವುದರಿಂದ ಸೀವಾಕ್‌ ಆಕರ್ಷಣೆಯ ಕೇಂದ್ರವಾಗಿದೆ.

ಗಂಗೊಳ್ಳಿ ತೀರ ಪ್ರದೇಶದಿಂದ ಸುಮಾರು 12 ನಾಟಿಕಲ್ ಮೈಲು ದೂರದ ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಳ್ಳುವ ಡಾಲ್ಫಿನ್‌ ಮೀನುಗಳು, ಹಿನ್ನೀರು ಹಾಗೂ ಸಮುದ್ರ ಸಂಧಿಸುವ ಅಳಿವೆ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವುದು ಜಿಜ್ಞಾಸೆಯನ್ನ ಹುಟ್ಟು ಹಾಕಿದೆ.

ಆಹಾರವನ್ನು ಹುಡುಕಿಕೊಂಡು ತೀರ ಪ್ರದೇಶಕ್ಕೆ ಬಂದಿರಬೇಕು. ಜತೆಗೆ, ಕೊರೊನಾ ಕಾರಣದಿಂದ ಸಮುದ್ರದಲ್ಲಿ ಬೋಟ್ ಹಾಗೂ ಹಡಗಿನ ಸಂಚಾರ ಕಡಿಮೆಯಾಗಿರುವುದರಿಂದಾಗಿ ಕಡಲಿನಲ್ಲಿ ನಿಶಬ್ಧತೆ ಹೆಚ್ಚಾಗಿದೆ. ಹಾಗಾಗಿ, ತೀರ ಪ್ರದೇಶಕ್ಕೆ ಲಗ್ಗೆ ಇಟ್ಟಿರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕೋಡಿ-ಗಂಗೊಳ್ಳಿ ಕಡಲ ಕಿನಾರೆಯ ಸಮೀಪದಲ್ಲಿ ದರ್ಶನ ನೀಡುತ್ತಿರುವ ಡಾಲ್ಫಿನ್‌ಗಳ ನೆಗೆತ ವಿಹಾರಾರ್ಥಿಗಳು ಖುಷಿ ಪಡುತ್ತಿದ್ದಾರೆ. 5-6 ಡಾಲ್ಫಿನ್ ಮೀನುಗಳು ಒಟ್ಟಾಗಿ ಚೆಲ್ಲಾಟವಾಡುತ್ತಿದ್ದು, ಇದನ್ನು ಕಣ್ತುಂಬಿಕೊಳ್ಳಲು ಹಾಗೂ ಫೋಟೋ ಸೆರೆ ಹಿಡಿಯಲು ಕೆಲವರು ಆಗಮಿಸುತ್ತಿದ್ದಾರೆ.

ಹೊರ ಜಿಲ್ಲೆಗಳಿಂದಲೂ ಬರುವ ವಿಹಾರಾರ್ಥಿಗಳು ಆಗಮಿಸುತ್ತಿರುವುದು ವಿಶೇಷ. ಸೀವಾಕ್ ಬಂಡೆ ಕಲ್ಲುಗಳ ಮೇಲೆ ಕುಳಿತು ಡಾಲ್ಫಿನ್ ನೆಗೆತ ಹಾಗೂ ದರ್ಶನಕ್ಕಾಗಿ ಗಂಟೆಗಳ ಕಾಲ ಕಾಯುವ ಕುತೂಹಲಿಗಳು ಇದ್ದಾರೆ. ಕೆಲವರು ದೋಣಿಗಳ ಮೂಲಕ ಒಂದಷ್ಟು ದೂರದವರೆಗೂ ಹೋಗಿ ಡಾಲ್ಫಿನ್‌ಗಳ ಆಟವನ್ನು ನೋಡಿಕೊಂಡು ಬರುತ್ತಿದ್ದಾರೆ.

ಈಚೆಗೆ ಮಾವಿನಕಟ್ಟೆಯ ಜಾವೇದ್ ಎಂಬುವರ ಕ್ಯಾಮೆರಾದಲ್ಲಿ ಡಾಲ್ಫಿನ್‌ಗಳ ಚೆಲ್ಲಾಟ ಸೆರೆಯಾಗಿದ್ದು, ಚಿತ್ರಗಳು ವೈರಲ್ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT