ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ಕೂರು: ವೈಜ್ಞಾನಿಕ ಕೃಷಿ ಮಾಡಿದಲ್ಲಿ ಕೃಷಿಯಲ್ಲಿ ಲಾಭ

ಕೋಟ ಹೋಬಳಿ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ
Last Updated 30 ಜುಲೈ 2021, 5:41 IST
ಅಕ್ಷರ ಗಾತ್ರ

ಬಾರ್ಕೂರು(ಬ್ರಹ್ಮಾವರ): ಕೃಷಿ ಇಲಾಖೆಯಿಂದ ಹಲವು ಯೋಜನೆಗಳು ರೈತರಿಗೆ ಲಭ್ಯವಿದ್ದು, ಮಾಹಿತಿಯನ್ನು ರೈತರಿಗೆ ತಲುಪಿಸುವ ಸಲುವಾಗಿ ಕೃಷಿ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಬಾರ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಶಾಂತರಾಮ ಶೆಟ್ಟಿ ಎಂದು ಹೇಳಿದರು.

ಬಾರ್ಕೂರಿನಲ್ಲಿ ಗುರುವಾರ ಉಡುಪಿ ಜಿಲ್ಲಾ ಪಂಚಾಯಿತಿ, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಹಾಗೂ ಗ್ರಾಮ ಪಂಚಾಯಿತಿ ಅಶ್ರಯದಲ್ಲಿ ನಡೆದ ಕೋಟ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೃಷಿ ಇಲಾಖೆ ಜತೆಗೆ ಸದಾ ಸಂಪರ್ಕದಲ್ಲಿದ್ದು, ವೈಜ್ಞಾನಿಕ ಕೃಷಿ ಮಾಡಿದಲ್ಲಿ ಕೃಷಿಯಲ್ಲಿ ಲಾಭ ಕಂಡುಕೊಳ್ಳಬಹುದು. ಕೋವಿಡ್ ಸಂದರ್ಭದಲ್ಲಿ ಕೃಷಿಯೇ ರೈತರ ಕೈ ಹಿಡಿದಿದ್ದು, ಕೃಷಿಗೆ ಭವಿಷ್ಯವಿದೆ ಮತ್ತು ಯುವ ಪೀಳಿಗೆ ಕೃಷಿ ಮಾಡುವಲ್ಲಿ ಮುಂದೆ ಬರಬೇಕು ಎಂದು ಹೇಳಿದರು.

ಉಡುಪಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಮೋಹನ್‌ ರಾಜ್ ಕೃಷಿ ಅಭಿಯಾನದ ಉದ್ದೇಶ ಮತ್ತು ಇಲಾಖೆ ಯೋಜನೆಗಳ ಬಗ್ಗೆ ಮತ್ತು ಜಿಲ್ಲಾ ವಿಮೆ ಸಂಯೋಜಕ ರವೀಂದ್ರ ಮೊಗವೀರ ಬೆಳೆ ವಿಮೆ ಕುರಿತು ಮಾಹಿತಿ
ನೀಡಿದರು.

ಬಾರ್ಕೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಉಷಾ, ಕೃಷಿ ವಿಜ್ಞಾನಿ ಸ್ವಾತಿ ಶೆಟ್ಟಿ, ಕೋಟ ಕೃಷಿ ಅಧಿಕಾರಿ ಸುಪ್ರಭಾ, ಪಂಚಾಯಿತಿ ಪಿಡಿಒ ವಂದನಾ, ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ್ ಶೆಟ್ಟಿ ಆತ್ಮ ಸಂಯೋಜಕಿ ಸಂಜನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT