ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 2.6 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

Last Updated 14 ನವೆಂಬರ್ 2022, 5:35 IST
ಅಕ್ಷರ ಗಾತ್ರ

ಪಡುಬಿದ್ರಿ: ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ₹ 2.6 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಲಾಲಾಜಿ ಆರ್. ಮೆಂಡನ್ ಶನಿವಾರ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ‘ಪಲಿಮಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಈಗಾಗಲೇ ₹ 13.20 ಕೋಟಿ ಅನುದಾನದಲ್ಲಿ ರಸ್ತೆಗಳಿಗೆ ಕಾಯಕಲ್ಪ, ದೇವಸ್ಥಾನ, ದೈವಸ್ಥಾನಗಳ ಅಭಿವೃದ್ಧಿಗೆ ಹೆಚ್ಚಿನ ಮೊತ್ತದ ಅನುದಾನ ಮೀಸಲಿರಿಸಿದೆ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ ಪ್ರಭು, ಉಪಾಧ್ಯಕ್ಷೆ ಸೌಮ್ಯಲತಾ ಶೆಟ್ಟಿ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಶಿಧರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವೀಣಾ ವಿವೇಕಾನಂದ, ಶೇಖರ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರವೀಣ್ ಕುಮಾರ್, ಮಹೇಶ್ ಶೆಟ್ಟಿ, ರಶ್ಮಿ, ಸುಜಾತಾ, ರಾಯೇಶ್ ಪೈ, ಪ್ರಿಯ ಶೆಟ್ಟಿ, ಸುಮಂಗಲ ದೇವಾಡಿಗ, ಮುಖಂಡರಾದ ಪ್ರಸಾದ್ ಪಲಿಮಾರು, ಲಕ್ಷ್ಮಣ್ ಶೆಟ್ಟಿ, ಸತೀಶ್ ಶೆಟ್ಟಿ, ಪ್ರವೀಣ್ ಶೆಟ್ಟಿ, ದಿನೇಶ್ ಪಲಿಮಾರು, ನಾರಾಯಣ ದೇವಾಡಿಗ, ವಾಸುದೇವ, ಮದುಕರ್ ಸುವರ್ಣ, ಸುರೇಶ್ ಕುಂಪಲ್ಲಿ, ಹರೀಶ್ ಶೆಟ್ಟಿ, ಪುಷ್ಪವತಿ, ಸದಾನಂದ ಪೂಜಾರಿ, ಹರೀಶ್ ಬಂಗೇರ, ಪ್ರತಾಪ್, ರೋಹಿತ್ ಪೂಜಾರಿ, ಪ್ರಕಾಶ್, ಪ್ರಜ್ವಲ್, ನಾಗರಾಜ್ ಭಟ್, ಚಂದ್ರಶೇಖರ್, ಅಂಗನವಾಡಿ ನಿರ್ಮಿಸಲು ಸ್ಥಳ ದಾನ ಮಾಡಿದ ಅಲ್ಫ್ರೆಡ್ ಪೂತಾರ್ದೋ ಕುಟುಂಬಸ್ಥರು ಹಾಗೂ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಇದ್ದರು.

ಶಿಲಾನ್ಯಾಸಗೊಂಡ ಕಾಮಗಾರಿಗಳು: ಮೂಡು ಪಲಿಮಾರು ಅಣಿಕಟ್ಟು ಪ್ರದೇಶದ ಕಾಲುವೆ- ₹ 50 ಲಕ್ಷ, ಮೂಡು ಪಲಿಮಾರು ಕರಣೀಕರಕಟ್ಟೆಯಿಂದ ರಿಕ್ಷಾನಿಲ್ದಾಣದವರೆಗೆ ರಸ್ತೆ ಅಭಿವೃದ್ಧಿ ₹ 10 ಲಕ್ಷ, ಮೂಡು ಪಲಿಮಾರು ಕುಂಪಳಿ ರಸ್ತೆ ಅಭಿವೃದ್ಧಿ ₹ 5 ಲಕ್ಷ, ಮೂಡು ಪಲಿಮಾರು ನವೀನ್ ಕುಕ್ಯಾನ್ ಮನೆ ಬಳಿ ರಸ್ತೆ ಅಭಿವೃದ್ಧಿ ₹ 2 ಲಕ್ಷ, ಮೂಡು ಪಲಿಮಾರು ಮೂಡು ಮನೆ ರಸ್ತೆ ಅಭಿವೃದ್ಧಿ ₹ 1.5 ಲಕ್ಷ, ಮೂಡು ಪಲಿಮಾರು ಸುಭಾಷ್‌ನಗರ ಚರಂಡಿ ಅಭಿವೃದ್ಧಿ ₹ 1.5 ಲಕ್ಷ, ಪಲಿಮಾರು ಹಾಗೂ ನಂದಿಕೂರು ಗ್ರಾಮದ ಆಯ್ದ ಬೀದಿಗಳಿಗೆ ಸೋಲಾರ್ ದಾರಿದೀಪ ಅಳವಡಿಕೆಗೆ ₹4 ಲಕ್ಷ, ಬೆರಂದಿಕಟ್ಟೆ ರೈಲ್ವೆ ಸ್ಟೇಷನ್ ಸಂಪರ್ಕ ರಸ್ತೆ ಅಭಿವೃದ್ಧಿ ₹ 10 ಲಕ್ಷ, ನಂದಿಕೂರು ಗ್ರಾಮದ ರಾಜೀವ್‌ನಗರ ಕಾಲೋನಿ ರಸ್ತೆ ಅಭಿವೃದ್ಧಿ ₹ 3 ಲಕ್ಷ, ಅಡ್ವೆ ಬೆಳ್ಳಿಬೆಟ್ಟು ರಸ್ತೆ ಅಭಿವೃದ್ಧಿ ₹ 15 ಲಕ್ಷ, ನಂದಿಕೂರು ಜೈನ ಬಸದಿ ರಸ್ತೆ ಅಭಿವೃದ್ಧಿ ₹ 25 ಲಕ್ಷ, ನಂದಿಕೂರು ಅನಡ್ಕ ರೈಲ್ವೆ ಟ್ರ್ಯಾಕ್ ಬಳಿ ರಸ್ತೆ ಅಭಿವೃದ್ಧಿ ₹ 25 ಲಕ್ಷ, ಅವರಾಲು ಅಂಗನವಾಡಿ ಕಟ್ಟಡ ರಚನೆ ₹ 20 ಲಕ್ಷ, ನಂದಿಕೂರು ಅಡ್ವೆ ಕೆಂಗಡಗುತ್ತು ರಸ್ತೆ ಅಭಿವೃದ್ಧಿ ₹10 ಲಕ್ಷ, ಪಟ್ಟೆಂಜೆ ಕಾಲಾಡಿ ರಸ್ತೆ ಅಭಿವೃದ್ಧಿ ₹ 10 ಲಕ್ಷ, ನಂದಿಕೂರು ಕಲ್ಲಾರು ರಸ್ತೆ ಅಭಿವೃದ್ಧಿ ₹ 9.5 ಲಕ್ಷ, ಅಡ್ವೆ ಜಯ ಸುವರ್ಣ ಮನೆ ಬಳಿ ರಸ್ತೆ ಅಭಿವೃದ್ಧಿ ₹ 5 ಲಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT