ಶುಕ್ರವಾರ, ಜೂನ್ 25, 2021
22 °C

ಬಡವರು ನಿರ್ಗತಿಕರಿಗೆ ಉಚಿತ ವಾಹನ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಬಡವರು ಹಾಗೂ ನಿರ್ಗತಿಕರನ್ನು ಆಸ್ಪತ್ರೆಗಳಿಗೆ ಉಚಿತವಾಗಿ ಕರೆದೊಯ್ಯಲು ಹಲವು ಕಾರು ಮಾಲೀಕರು ಮುಂದೆ ಬಂದಿದ್ದು, ಸಾರಿಗೆ ಇಲಾಖೆಯಿಂದ ವಾಹನಗಳ ಸಂಚಾರಕ್ಕೆ ಅನುಮತಿ ಪತ್ರ ನೀಡಲಾಯಿತು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ್ ತಿಳಿಸಿದ್ದಾರೆ.

‘ಉಚಿತ ಆರೋಗ್ಯ ಸೇವೆ-ಸ್ವಯಂ ಸೇವಕ ಚಾಲಕ’ ಎಂಬ ಘೋಷವಾಕ್ಯದೊಂದಿಗೆ 9 ಮಂದಿ ಚಾಲಕರು ವೈದ್ಯಕೀಯ ತುರ್ತು ನೆರವಿಗೆ  ಉಚಿತವಾಗಿ ಕಾರುಗಳ ಸೇವೆ ನೀಡಲು ಮುಂದೆ ಬಂದಿದ್ದಾರೆ. ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯುವ ಹಾಗೂ ನಿವಾಸಕ್ಕೆ ಕರೆದೊಯ್ಯುವ ಕಾರ್ಯ ಮಾಡಲಿದ್ದಾರೆ.

ಜಿಲ್ಲಾಧಿಕಾರಿ ಅವರಿಂದಲೂ ಅನುಮತಿ ಪಡೆದಿದ್ದು, ಉಚಿತಸೇವೆ ಅಗತ್ಯವಿದ್ದವರು ದೀಪಕ್ ಕೋಟ್ಯಾನ್: 9632893328, ಅಬ್ದುಲ್ ಲತೀಫ್: 9008300900 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು