ಅರ್ಚಕ ರಾಮಕೃಷ್ಣ ಭಟ್ ನೇತೃತ್ವದಲ್ಲಿ ಮಹಾಗಣಪತಿ ದೇವರಿಗೆ 108 ಕಾಯಿ ಗಣಹವನ, ಸಹಸ್ರ ದೂರ್ವಾರ್ಚನೆ, ರಂಗಪೂಜೆ, ಅಲಂಕಾರ ಪೂಜೆ, ಮೋದಕ ನೈವೇದ್ಯ ಸೇವೆ, ಹಣ್ಣುಕಾಯಿ, ಮಂಗಳಾರತಿ ಸೇವೆ, ಕಡುಬು ಸೇವೆ ನಡೆಯಿತು. ಸೇವಾಕರ್ತ ಸತೀಶ ಕೊಠಾರಿ ಅವರಿಂದ ಅನ್ನದಾನ ಸೇವೆ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದರು.