‘ನೆರವಿನ ಹಸ್ತ ಚಾಚುವವರು ನಾಯರಿ’

ಬ್ರಹ್ಮಾವರ: ಸರಳ, ಸಜ್ಜನ, ಅಗತ್ಯಕ್ಕೆ ಸದಾ ನೆರವಿನ ಹಸ್ತ ಚಾಚುವ ರಂಗಕರ್ಮಿ ಗೋಪಾಲಕೃಷ್ಣ ನಾಯರಿ ಅವರದು ಅಪರೂಪದ ವ್ಯಕ್ತಿತ್ವವಾಗಿತ್ತು. ಜಾನಪದ ಕಲಾಪ್ರಕಾರಗಳನ್ನು ತಮ್ಮದೇ ರೀತಿಯಲ್ಲಿ ರಂಗಭೂಮಿಗೆ ಅಳವಡಿಸಿ ಪ್ರದರ್ಶಿಸುವುದರಲ್ಲಿ ಸಿದ್ಧಹಸ್ತರಾಗಿದ್ದರು ಎಂದು ಸಾಲಿಗ್ರಾಮ ಮಕ್ಕಳ ಮೇಳದ ಸಂಸ್ಥಾಪಕ ಎಚ್.ಶ್ರೀಧರ ಹಂದೆ ನುಡಿದರು.
ಕೋಟದ ರಸರಂಗದ ವತಿಯಿಂದ ಕದ್ರಿಕಟ್ಟು ರಂಗಚಾವಡಿಯಲ್ಲಿ ನಡೆದ ದೇಸಿ ಖ್ಯಾತಿಯ ರಂಗನಿರ್ದೇಶಕ ದಿ.ಗೋಪಾಲಕೃಷ್ಣ ನಾಯರಿ ಅವರಿಗೆ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
ನಂತರ ನಡೆದ ‘ಹಚ್ಚೇವು ಕನ್ನಡದ ದೀಪ’ ರಾಜ್ಯೋತ್ಸವ ಸರಣಿ ಕಾರ್ಯಕ್ರಮದಲ್ಲಿ ಮಂಗಳೂರಿನ ಕರ್ಣಾಟಕ ಯಕ್ಷಧಾಮದ ಸಂಚಾಲಕ ಹಾಗೂ ಕಲಾಸಂಘಟಕ ಎಚ್.ಜನಾರ್ದನ ಹಂದೆ ಮಾತನಾಡಿ, ‘ಕನ್ನಡ ಮಾತೆಂದರೆ ಸಿಹಿಯಾದ ಹೋಳಿಗೆಯನ್ನು ಸವಿದಂತೆ. ಕಲೆ, ಸಾಹಿತ್ಯ, ಸಂಗೀತ ಮುಂತಾದ ಕನ್ನಡ ಕಾರ್ಯಕ್ರಮಗಳು ಹೀಗೆಯೇ ನಿರಂತರವಾಗಿ ನಡೆಯಲಿ. ಕನ್ನಡ ಮನಸ್ಸುಗಳಿಗೆ ನಿತ್ಯ ರಸದೌತಣವನ್ನು ಉಣಬಡಿಸಲಿ’ ಎಂದರು.
ಎಚ್.ಜನಾರ್ದನ ಹಂದೆ ಹಾಗೂ ಸಾಂಸ್ಕೃತಿಕ ಸಂಘಟಕಿ,ಭಾಗ್ಯ ವಾದಿರಾಜ್ ಅವರನ್ನು ರಾಜ್ಯೋತ್ಸವ ಗೌರವ ನೀಡಿ ಪುರಸ್ಕರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು.
ರಾಘವೇಂದ್ರ ನಾಯರಿ ಹಾಗೂ ಶಿವಾನಂದ ಹೊಳ್ಳ ಇದ್ದರು. ರಸರಂಗದ ಅಧ್ಯಕ್ಷೆ ಸುಧಾ ಮಣೂರು ಸ್ವಾಗತಿಸಿದರು. ಸುಶೀಲಾ ಸೋಮಶೇಖರ್ ವಂದಿಸಿದರು. ಸುಪ್ರೀತಾ ಪುರಾಣಿಕ್ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.