ಬ್ರಹ್ಮಾವರ: ಇಲ್ಲಿನ ನಂಚಾರಿನಲ್ಲಿರುವ ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ನ ಗೋಶಾಲೆಗೆ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ವಂಡಾರು ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವತಿಯಿಂದ ಭಾನುವಾರ ಮೈರ್ಕೊಮೆಯಲ್ಲಿ ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನದಿಂದ ಸಂಗ್ರಹವಾದ ₹2.30 ಲಕ್ಷ ದೇಣಿಗೆಯನ್ನು ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ನ ಅಧ್ಯಕ್ಷ ಗೋವಿಂದ ವಂಡಾರು ಹಸ್ತಾಂತರಿಸಿದರು.

ದೇಣಿಗೆಯನ್ನು ಸ್ವೀಕರಿಸಿ ಮಾತನಾಡಿದ ನಂಚಾರು ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ಮುಖ್ಯಸ್ಥ ರಾಜೇಂದ್ರ ಚಕ್ಕೇರ, ಅನಾಥ ಗೋವುಗಳ ಸೇವೆಯಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡಿರುವ ನಂಚಾರು ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ ನೆರವಿಗೆ ನಾದನೂಪುರ ಯಕ್ಷೋತ್ಥಾನ ನಿಂತಿರುವುದು ಸಂತಸದ ವಿಚಾರ. ಯಕ್ಷಗಾನ ಕಲಾವಿದರಾಗಿ ಗೋವಿಂದ ವಂಡಾರು ಅವರು ತಮ್ಮ ಟ್ರಸ್ಟ್ ಮುಖಾಂತರ ಗೋವುಗಳ ಪೋಷಣೆ ಹಾಗೂ ರಕ್ಷಣೆ ಮಾಡುತ್ತಿದ್ದಾರೆ ಎಂದರು.

ಯಕ್ಷೋತ್ಥಾನ ಟ್ರಸ್ಟ್ನ ಗೋವಿಂದ ವಂಡಾರು ಮಾತನಾಡಿ, ‘ನಮ್ಮದೇ ಊರಿನ ಗೋಶಾಲೆಗೆ ಜಲಸಂಪರ್ಕ ವ್ಯವಸ್ಥೆ ಕಲ್ಪಿಸಬೇಕೆಂಬ ಕನಸು ನನ್ನದಾಗಿತ್ತು. ಯಕ್ಷಗಾನ ಕಲಾವಿದನಾಗಿ ಕಲೆಯಿಂದ ಬದುಕು, ಮನ್ನಣೆ ಎಲ್ಲವನ್ನೂ ಪಡೆದುಕೊಂಡಿದ್ದೇನೆ. ಅದೇ ಕಲೆಯ ಮೂಲಕ ಗೋಮಾತೆಗೆ ಸೇವೆ ಸಲ್ಲಿಸಲು ಅವಕಾಶ ದೊರಕಿರುವುದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಈ ಪುಣ್ಯದ ಕೆಲಸದಲ್ಲಿ ಭಾಗಿಯಾದ ಎಲ್ಲರಿಗೂ ಕೃತಜ್ಞತೆ ಸಮರ್ಪಿಸುತ್ತೇನೆ’ ಎಂದರು.

ರಾಜೇಂದ್ರ ಚಕ್ಕೇರ, ಗೋವಿಂದ ವಂಡಾರು ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಾಪ ಹೆಗ್ಡೆ ಮಾರಾಳಿ, ಸುಧೀರ ಅಮೀನ ಕೊಕ್ಕರ್ಣೆ, ನಾಗರಾಜ ಕುಲಾಲ, ಗುಣವತಿ ಚಂದ್ರಶೇಖರ ಅವರನ್ನು ಅಭಿನಂದಿಸಲಾಯಿತು.

ಮಂದಾರ್ತಿ ದೇವಸ್ಥಾನದ ಆನುವಂಶೀಯ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ, ಯಕ್ಷ ಪೋಷಕ ಚೋರಾಡಿ ರಾಜೀವ ಶೆಟ್ಟಿ, ಕೊಕ್ಕರ್ಣೆ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರವೀಣ ಶೆಟ್ಟಿ ವಂಡಾರು, ನಂಚಾರು ಗೋಶಾಲೆಯ ಸ್ಥಾಪಕಾಧ್ಯಕ್ಷ ರಾಜೇಂದ್ರ ಚಕ್ಕೆರ, ಕುಂದಾಪುರ ಕನ್ನಡದ ರಾಯಭಾರಿ ಮನು ಹಂದಾಡಿ, ಯಕ್ಷಗಾನ ಪೋಷಕ ಅಂಡ್ರೂಯ್ ಡಿಸಿಲ್ವ, ಕೊಕ್ಕರ್ಣೆಯ ಹಳ್ಳಿ ಗೋಪಾಲಕೃಷ್ಣ ಮಠದ ರಾಮಚಂದ್ರ ಶಾಸ್ತ್ರಿ, ಪ್ರಸಂಗಕರ್ತೆ ಶುಭಾಶಯ ಜೈನ್ ಇದ್ದರು.

ಅಧ್ಯಾಪಕ ಶಶಿಧರ ಶೆಟ್ಟಿ ನಂಚಾರು ಕಾರ್ಯಕ್ರಮ ನಿರೂಪಿಸಿದರು.

ಗೋವುಗಳ ಪೋಷಣೆಗೆ ಪ್ರತಿಯೊಬ್ಬರೂ ಕೈಲಾದ ಸಹಾಯ ಮಾಡಬೇಕು. ಗೋಪೂಜೆ ಹಬ್ಬಕ್ಕೆ ಮನೆಯಲ್ಲಿ ಮಾತ್ರ ಮಾಡುವುದು ಅಲ್ಲ.
ಮನು ಹಂದಾಡಿ ಕುಂದಾಪುರ ಕನ್ನಡದ ರಾಯಭಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.