ಶನಿವಾರ, ಡಿಸೆಂಬರ್ 3, 2022
26 °C
ಶಿರಿಯಾರ ಜೈಗಣೇಶ್‌ ಕ್ರೆಡಿಟ್‌ ಸಹಕಾರಿ ಸಂಸ್ಥೆ: ಗೋವುಗಳ ಪಾಲನೆ–ಪೋಷಣೆಗೆ ಬದ್ಧ

ಲಾಭದಲ್ಲಿ ಒಂದು ಪಾಲು ಗೋರಕ್ಷಾ ನಿಧಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬ್ರಹ್ಮಾವರ: ‘ಸಾಯಿಬ್ರಕಟ್ಟೆ ಶಿರಿಯಾರದ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನಿವ್ವಳ ಲಾಭದಲ್ಲಿ ಶೇಕಡಾ 1ರಷ್ಟು ಗೋರಕ್ಷಾ ನಿಧಿಯಾಗಿ ಗೋವುಗಳ ಪಾಲನೆ ಪೋಷಣೆಗೆ ಮೀಸಲಿಡುತ್ತಿದ್ದು, ಇತರ ಸಂಘ ಸಂಸ್ಥೆಗಳು ಇದೇ ಮಾದರಿಯಲ್ಲಿ ಗೋವುಗಳ ರಕ್ಷಣೆಗೆ ಮುಂದಾಗಬೇಕು’ ಎಂದು ಸಂಸ್ಥೆಯ ಅಧ್ಯಕ್ಷ ಅಶೋಕ ಪ್ರಭು ಆಶಿಸಿದರು.

ಸಾಯಿಬ್ರಕಟ್ಟೆ ಶಿರಿಯಾರದ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ವತಿಯಿಂದ ನಂಚಾರು ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್‌ಗೆ ಗೋಗ್ರಾಸ ವಿತರಿಸಿ ಅವರು ಮಾತನಾಡಿದರು.

ಸಂಸ್ಥೆ ಮುಂದಿನ ದಿನಗಳಲ್ಲಿ ವರ್ಷದ ಲಾಭಾಂಶದಲ್ಲಿ ಶೇ 2ರಷ್ಟು ಗೋಸೇವಾ ಕಾರ್ಯಕ್ಕೆ ಮೀಸಲಿಡಲಿದೆ ಎಂದು ತಿಳಿಸಿದ ಅವರು, ಸಹಕಾರಿ ಸುಮಾರು 3 ವರ್ಷದ ಅವಧಿಯಿಂದ ಕ್ರೋಡೀಕೃತ ಗೋರಕ್ಷಾ ನಿಧಿ ₹1.30ಲಕ್ಷ ಮೌಲ್ಯದ ಒಣ ಹುಲ್ಲನ್ನು ಗೋಶಾಲೆಗೆ ನೀಡಲಾಗಿದೆ. ಉಳಿದ ಮೊತ್ತವನ್ನು ಈಗಾಗಲೇ ನಿಶ್ಚಯಿಸಿದ್ದಂತೆ 2 ಗೋಶಾ ಲೆಗಳಿಗೆ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾ ಧ್ಯಕ್ಷ ಗಾವಳಿಯ ಎಚ್.ನಾರಾಯಣ ಶೆಣೈ, ನಿರ್ದೇಶಕರಾದ ಮಧುವನ ಮಾಧವ ಹೆಗ್ಡೆ, ಸಾಯಿಬ್ರಕಟ್ಟೆ ಜಗದೀಶ ಹೆಗ್ಡೆ, ಎಂ.ರವೀಂದ್ರನಾಥ ಕಿಣಿ, ಕಾರ್ಯದರ್ಶಿ ಶಿವಾನಂದ ಶ್ಯಾನು ಭೋಗ್ ಎತ್ತಿನಟ್ಟಿ ಇದ್ದರು. ಟ್ರಸ್ಟ್ ಅಧ್ಯಕ್ಷ ರಾಜೇಂದ್ರ, ಚಕ್ಕೇರ ಮತ್ತು ಕೋಶಾಧಿಕಾರಿ ಕೋಟ ರಾಮಕೃಷ್ಣ ಆಚಾರ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.