ಉಡುಪಿ: ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಅಪರೂಪದ ದೈತ್ಯ ಗಿಟಾರ್ ಶಾರ್ಕ್ ಮೀನು ಸಿಕ್ಕಿದೆ. 84 ಕೆ.ಜಿ ಗಾತ್ರದ ಈ ಮೀನನ್ನು ಬಂದರಿಗೆ ತಂದು ಹಾಕಲಾಗಿತ್ತು. ಸ್ಥಳೀಯರು ಕುತೂಹಲದಿಂದ ಮೀನನ್ನು ವೀಕ್ಷಣೆ ಮಾಡಿದರು.
ಸಮುದ್ರದಿಂದ 24 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರರ ಬಲೆಗೆ ಗಿಟಾರ್ ಶಾರ್ಕ್ ಮೀನು ಬಿದ್ದಿದೆ. ಮೀನಿನ ಬೆನ್ನಿನ ಮೇಲೆ ದೊಡ್ಡಗಾತ್ರದ ರೆಕ್ಕೆಗಳಿದ್ದು, ಗಿಟಾರ್ ಮಾದರಿಯ ದೇಹ ರಚನೆ ಹೊಂದಿದೆ.
ಕರ್ನಾಟಕದಲ್ಲಿ ಈ ಮೀನನ್ನು ಸೇವಿಸುವುದಿಲ್ಲ, ಕೇರಳದಲ್ಲಿ ಮೀನಿನ ಮಾಂಸಕ್ಕೆ ಬೇಡಿಕೆ ಇದೆ ಎಂದು ಸ್ಥಳೀಯ ಮೀನುಗಾರರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.