ಉಡುಪಿ: ಜಿಲ್ಲೆಯಾದ್ಯಂತ ಬುಧವಾರ ಭಾರಿ ಮಳೆ ಸುರಿದ ಪರಿಣಾಮ ಕೆಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಗುರುವಾರ ಬೆಳಿಗ್ಗೆ ಅಲ್ಪಕಾಲ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನ 12 ಗಂಟೆಯ ಬಳಿಕ ಮತ್ತೆ ಧಾರಾಕಾರ ಮಳೆ ಸುರಿದಿದೆ.

ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದಿರುವ ಕಾರಣ ಬ್ರಹ್ಮಾವರ ತಾಲ್ಲೂಕಿನ ಹಾವಂಜೆ, ಆರೂರು ಬೆಳ್ಮಾರು, ಹೇರೂರು, ನೀಲಾವರ, ಬಾವಲಿಕುಕುದ್ರು, ಉಪ್ಪೂರು ಪ್ರದೇಶಗಳಲ್ಲಿ ಮಡಿಸಾಲು ಮತ್ತು ಸೀತಾನದಿ ಉಕ್ಕಿ ಹರಿದು ಪ್ರವಾಹ ಕಾಣಿಸಿಕೊಂಡಿದೆ.

ಕಳೆದ ಒಂದು ವಾರದಿಂದ ನಿರಂತರವಾಗಿ ಪ್ರವಾಹ ಕಾಣಿಸಿಕೊಳ್ಳುತ್ತಿರುವುದರಿಂದ ನದೀ ತೀರದ ಭತ್ತದ ಗದ್ದೆಗಳಲ್ಲಿ ಬೆಳೆ ಕೊಳೆಯುವ ಭೀತಿ ಎದುರಾಗಿದೆ.

ಆರೂರಿನ ಕೆಲವೆಡೆ ನದೀ ತೀರದ ಭತ್ತದ ಗದ್ದೆಗಳಲ್ಲಿ ಮರಳು ಶೇಖರಣೆಗೊಂಡು ಬೆಳೆ ನಾಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.