ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಬ್ರಿ | ಮಳೆ: ಗದ್ದೆಗಳು ಜಲಾವೃತ

Published 5 ಜುಲೈ 2024, 4:17 IST
Last Updated 5 ಜುಲೈ 2024, 4:17 IST
ಅಕ್ಷರ ಗಾತ್ರ

ಹೆಬ್ರಿ: ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು ಕುಚ್ಚೂರು ಕುಡಿಬೈಲು, ವರಂಗ ಗ್ರಾಮದ ಮಾತಿಬೆಟ್ಟು, ಶಿವಪುರ ಸೇರಿದಂತೆ ಹಲವೆಡೆ ಮಳೆಯಿಂದ ಭತ್ತದ ಗದ್ದೆಗಳು ಜಲಾವೃತಗೊಂಡಿದೆ.

ಹಳ್ಳ, ನದಿಗಳು ತುಂಬಿ ಹರಿಯುತ್ತಿದ್ದು, ಶಿವಪುರ ಗ್ರಾಮದ ಹಲವೆಡೆ ಗಾಳಿ–ಮಳೆಗೆ 10 ವಿದ್ಯುತ್‌ ಕಂಬಗಳು ಧರೆಗುರುಳಿವೆ. ಇದರಿಂದ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಿದೆ.

ಧರ್ಮಸ್ಥಳ ಯೋಜನೆಯ ತಂಡ ಭೇಟಿ

ಹೆಬ್ರಿ: ಚೇರ್ಕಾಡಿ ವಲಯದ ಕುರ್ಪಾಡಿಯಲ್ಲಿ ಗಾಳಿ–ಮಳೆಗೆ 32 ಮನೆಗಳ ಮೇಲೆ ಮರಗಳು ಬಿದ್ದು ಹಾನಿಯಾಗಿದ್ದು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳ ತಂಡ ಎಲ್ಲ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಚೆರ್ಕಾಡಿ ವಲಯದ ಮೇಲ್ವಿಚಾರಕಿ ಆಶಾಲತಾ, ಹೆಬ್ರಿ ತಾಲ್ಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಚಂದ್ರಾವತಿ, ಶೌರ್ಯ ವಿಪತ್ತು ಘಟಕದ ಅಧ್ಯಕ್ಷ ಸತೀಶ್, ಸೇವಾ ಪ್ರತಿನಿಧಿಗಳಾದ ಶಶಿಕಲಾ, ಜ್ಯೋತಿ, ಆಶಾ, ಒಕ್ಕೂಟದ ಅಧ್ಯಕ್ಷೆ ಛಾಯ ಇದ್ದರು.

ಹೆಬ್ರಿ ತಾಲ್ಲೂಕಿನ ವರಂಗ ಗ್ರಾಮದ ಮಾತಿಬೆಟ್ಟಿನಲ್ಲಿ ಗುರುವಾರ ಸುರಿದ ಭಾರಿ ಮಳೆಯಿಂದ ಭತ್ತದ ಗದ್ದೆಗಳು ಜಲಾವೃತಗೊಂಡಿರುವುದು

ಶಿವಪುರ ಗ್ರಾಮದ ಹಲವೆಡೆ ಗಾಳಿ–ಮಳೆಗೆ ವಿದ್ಯುತ್‌ ಕಂಬಗಳು ಧರೆಗುರುಳಿವೆ

ಚೇರ್ಕಾಡಿ ವಲಯದ ಕುರ್ಪಾಡಿಯಲ್ಲಿ ಗಾಳಿ–ಮಳೆಗೆ 32 ಮನೆಗಳ ಮೇಲೆ ಮರಗಳು ಬಿದ್ದು ಹಾನಿಯಾಗಿದ್ದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳ ತಂಡ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT