ಹೆಬ್ರಿ: ತಾಲ್ಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದ ಜಡ್ಡುಗುಳೆಲ್ ರಸ್ತೆಗೆ ಪುಂಡಾಲು ಎಂಬಲ್ಲಿ ಸೇತುವೆ ಇಲ್ಲದೆ ಜನರ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಈಗ ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದರಿಂದ ಶನಿವಾರ ಸ್ಥಳ ಪರಿಶೀಲನೆ ಕಾರ್ಯ ನಡೆಯಿತು.

ಇಲ್ಲಿನ ಜನರು ಮಳೆಗಾಲದಲ್ಲಿ ಕಾಲುಸಂಕದ ಮೂಲಕ ಸುತ್ತು ಹಾಕಿ ಮುನಿಯಾಲು, ಕಬ್ಬಿನಾಲೆ ಪೇಟೆ, ಬಸ್ ನಿಲ್ದಾಣ, ಶಾಲೆಗೆ ಹೋಗುವಂತಹ ಸ್ಥಿತಿ ಇತ್ತು. ಕಾರ್ಕಳ ಶಾಸಕ ಸುನಿಲ್ ಕುಮಾರ್ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ ಅವರ ವಿಶೇಷ ಕಾಳಜಿಯಿಂದ 40 ವರ್ಷಗಳ ಬೇಡಿಕೆ ಇದೀಗ ಈಡೇರುತ್ತಿದೆ. ಸೇತುವೆ ಸಹಿತ ಕಿಂಡಿ ಅಣೆಕಟ್ಟೆ ನಿರ್ಮಾಣದ ಹಂತಕ್ಕೆ ಬಂದಿದೆ ಎಂದು ಸ್ಥಳೀಯ ಪ್ರಮುಖ ಮುದ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಗೌಡ ಪಾರಿಕಲ್ ಹೇಳಿದರು.

ಸೇತುವೆ ಸಮಸ್ಯೆಯಿಂದ ಮಳೆಗಾ ಲದಲ್ಲಿ ಹೈನುಗಾರರು ಡೇರಿಗೆ ಹಾಲು ನೀಡಲು ಹೋಗುವುದಕ್ಕೆ ಸಾಧ್ಯವಾಗದೆ ಅನೇಕರು ಜಾನುವಾರು ಮಾರಾಟ ಮಾಡಿರುವ ನಿದರ್ಶನಗಳಿವೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವುದು ಕೂಡ ಕಷ್ಟವಾಗಿತ್ತು. ಆರು ತಿಂಗಳ ಮಟ್ಟಿಗೆ ಬೇಕಾಗುವ ದಿನಸಿಯನ್ನು ಇಲ್ಲಿನ ಜನರು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಇಲ್ಲಿ ಹೆಚ್ಚಿನ ಜನರು ಕೂಲಿ ಕಾರ್ಮಿಕರು. ಸೇತುವೆ ನಿರ್ಮಾಣದ ಮಾಹಿತಿ ತಿಳಿದು ಸ್ಥಳೀಯರ ಮೊಗದಲ್ಲಿ ಸಂತ ಉಂಟಾಗಿದೆ.

ಮಳೆಗಾಲದಲ್ಲಿ ದ್ವೀಪದಂತೆ ಆಗುತ್ತಿದ್ದ ಭಂಡಾರಬೆಟ್ಟು, ಶಿವರಾಮಡಿ ಮತ್ತು ಜಾರ್ಮೆಟ್ಟು ಪ್ರದೇಶದ ಸ್ಥಳೀಯರು ಹೊಳೆಗೆ ಅಡ್ಡವಾಗಿ ಅಡಿಕೆ ಮರದಿಂದ ಕಾಲು ಸಂಕ ನಿರ್ಮಿಸಿ ಸಂಚಾರ ಮಾಡುವಂತಹ ಸ್ಥಿತಿ ಇತ್ತು.

ಆರೋಗ್ಯ ಹದಗೆಟ್ಟರೆ ಅಪಾಯ

ಶಿವರಮಡಿ ಎಂಬಲ್ಲಿ ಎರಡು ಹಳ್ಳಗಳು ಒಟ್ಟಾಗಿ ಕುಂಡಲಿ ಎಂಬಲ್ಲಿ ದೊಡ್ಡ ಗಾತ್ರದಲ್ಲಿ ಹರಿಯುತ್ತದೆ. ಮಳೆಗಾಲದಲ್ಲಿ ಇಲ್ಲಿನ ಜನರ ಆರೋಗ್ಯ ಹದಗೆಟ್ಟರೆ ತುಂಬಾ ಸಮಸ್ಯೆ ಹೇಳ ತೀರದು. ಅನಿವಾರ್ಯವಾಗಿ ಕಾಲು ಸಂಕದ ಮೂಲಕ ಹೋಗಬೇಕಾದ ಸ್ಥಿತಿ ಇತ್ತು. ಶಾಲಾ ಮಕ್ಕಳು ಇದೇ ಅಪಾಯಕಾರಿ ಕಾಲು ಸಂಕದ ಮೂಲಕ ಶಾಲೆಗೆ ಹೋಗಬೇಕಾಗಿತ್ತು. ಹಲವು ಬಾರಿ ಜನರಿಗೆ ಅಪತ್ತು ಎದುರಾಗಿದ್ದು ಇದೇ ಎನ್ನುತ್ತಾರೆ ಸತೀಶ ಗೌಡ.

ಎಂಜಿನಿಯರ್ ಪಾಲಣ್ಣ, ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೆಗ್ಡೆ, ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ, ಪಲ್ಲವಿ ರಾವ್ ಸಹಿತ ಸ್ಥಳೀಯರು ಇದ್ದರು.

40 ವರ್ಷಗಳ ಬೇಡಿಕೆ ಈಡೇರಿದಕ್ಕೆ ಜನರು ಶಾಸಕ ಸುನಿಲ್ ಕುಮಾರ್ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹರೀಶ್ ಮತ್ತು ಮುದ್ರಾಡಿ ಗ್ರಾಮ ಪಂಚಾಯಿತಿ ಸೇವೆಯನ್ನು ಸ್ಮರಿಸಿದರು.

ಶೀಘ್ರ ಸೇತುವೆ ನಿರ್ಮಾಣ

ಶಾಸಕರ ವಿಶೇಷ ಮುತುವರ್ಜಿಯಿಂದ ಈ ಕಾರ್ಯ ಸಾಧ್ಯವಾಗಿದೆ. 40 ವರ್ಷದ ಬೇಡಿಕೆ ಇದಾಗಿದ್ದು, ಸ್ಥಳೀಯರು ಹಲವು ಬಾರಿ ವಿಷಯದ ಬಗ್ಗೆ ನನ್ನ ಗಮನಕ್ಕೆ ತಂದಿದ್ದರು. ನಾನು ಶಾಸಕರ ಜತೆಗೆ ಸಕಾಲದಲ್ಲಿ ಚರ್ಚಿಸಿರುವುದರಿಂದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಆಗಲಿದೆ ಎಂದು ನಿಕಟಪೂರ್ವ ಜಿಲ್ಲಾ ಪಂಚಾಯಿತಿ ಸದಸ್ಯ ಜ್ಯೋತಿ ಹರೀಶ್ ಪೂಜಾರಿ ಹೇಳಿದರು.

ಕಷ್ಟದ ದಿನಗಳು

ಸೇತುವೆ ಇಲ್ಲದ ಕಾರಣ ಬಹಳ ಕಷ್ಟದ ದಿನವನ್ನು ಅನುಭವಿಸಿದ್ದೇವೆ. ಸೇತುವೆ ಸಹಿತ ಕಿಂಡಿ ಅಣೆಕಟ್ಟೆ ನಿರ್ಮಾಣ ಆಗುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. 40 ವರ್ಷದ ಬೇಡಿಕೆ ಈಡೇರಿದೆ ಎಂದು ಸ್ಥಳೀಯರಾದ ಶ್ರೀನಿಧಿ ಭಟ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.