ಸೋಮವಾರ, ಸೆಪ್ಟೆಂಬರ್ 27, 2021
21 °C
ನೀಲಾವರ ಹಡಿಲು ಭೂಮಿ ಕೃಷಿ ನಾಟಿಗೆ ಚಾಲನೆ

ಭೂಮಿಗೆ ಜೀವ ನೀಡುವ ಕೆಲಸ: ಕಲ್ಲಡ್ಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೀಲಾವರ (ಬ್ರಹ್ಮಾವರ): ‘ಕೃಷಿ ಸಂಸ್ಕೃತಿ, ಋಷಿ ಸಂಸ್ಕೃತಿ ನಮ್ಮ ದೇಶದ ಸಂಸ್ಕೃತಿ. ನಮ್ಮ ಜನ ಎಲ್ಲಾ ವಿಚಾರ ಗಳಲ್ಲೂ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಈ ಭೂಮಿ ನಮ್ಮನ್ನು ಹೊತ್ತ ತಾಯಿ. ಹಸನು ಮಾಡುವ ಕೃಷಿ ಕಾರ್ಯ ಭೂಮಿಗೆ ಜೀವ ನೀಡುವ ಕೆಲಸ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.

ನೀಲಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳುವಿನ ಬೆಟ್ಟಿನ ಹಡಿಲು ಭೂಮಿಯಲ್ಲಿ ಶುಕ್ರವಾರ ಕೇದಾರೋತ್ಥಾನ ಟ್ರಸ್ಟ್ ವತಿಯಿಂದ 19 ಎಕರೆ ಹಡಿಲು ಭೂಮಿ ಸಾವಯವ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕೃಷಿ ಸಂಸ್ಕೃತಿ ಬೆಳೆಸಿದರೆ ಭಾರತೀಯ ಸಂಸ್ಕೃತಿ ಬೆಳೆದಂತೆ. ನಮ್ಮ ಮಕ್ಕಳಲ್ಲಿ ಕೃಷಿ ಸಂಸ್ಕೃತಿಯ ಬಗ್ಗೆ ತಿಳಿ ಹೇಳುವ ಅವಶ್ಯಕತೆ ಇದೆ. ವಿಪರೀತ ಪಾಶ್ಚಾತ್ಯೀಕರಣ, ಕೃಷಿಯಿಂದ ಲಾಭ ಕಡಿಮೆ ಎನ್ನುವ ಮನಃಸ್ಥಿತಿಯಿಂದ ಕೃಷಿ ಭೂಮಿಗಳು ಹಡಿಲು ಬೀಳುತ್ತಿವೆ. ನಮ್ಮದು ಮಣ್ಣಿನ ಸಂಸ್ಕೃತಿ, ಮಣ್ಣಿನಲ್ಲಿ ಬೆರೆಯಬೇಕು. ಅಂದರೆ ಕೃಷಿ ಮಾಡಬೇಕು. ಇದರಿಂದ ಸದೃಢ ಆರೋಗ್ಯ ನಮ್ಮದಾಗುತ್ತದೆ. ತಾಯಿಯಂತೆ ಪೂಜಿಸುವ ಭೂಮಿ ಯನ್ನು ಬರಿದಾಗಲು ಬಿಡಬಾರದು. ಈ ನಿಟ್ಟಿನಲ್ಲಿ ಉಡುಪಿಯಲ್ಲಿ ನಡೆಯುತ್ತಿರುವ ಈ ಕೃಷಿ ಕಾರ್ಯ ಜಗತ್ತೇ ಮೆಚ್ಚುವಂತದ್ದು. ಇದಕ್ಕೆ ಎಲ್ಲರೂ ಸ್ಪಂದನೆ ನೀಡಬೇಕು’ ಎಂದು ಹೇಳಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಮಾತನಾಡಿ, ಶಾಸಕ ರಘುಪತಿ ಭಟ್ ಅವರು ಹಡಿಲು ಭೂಮಿ
ಕೃಷಿ ಇತರರಲ್ಲಿ ಹಸಿರು ಕ್ರಾಂತಿ ಮೂಡಿಸಿ, ಮಾದರಿಯಾಗಿದ್ದಾರೆ ಎಂದರು.

ನೀಲಾವರ ಹಡಿಲು ಭೂಮಿ ಕೃಷಿ ಆಂದೋಲನಕ್ಕೆ ಸಹಕರಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಸಿಕೊಂಡಿರುವ ಸಂಘ ಸಂಸ್ಥೆಯವರಿಗೆ, ಭೂ ಮಾಲೀಕರಿಗೆ, ಶಾಸಕ ಕೆ.ರಘುಪತಿ ಭಟ್ ಕೃತಜ್ಞತೆ ಸಲ್ಲಿಸಿ ಅಭಿನಂದಿಸಿದರು.

ನೀಲಾವರ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ರಘುರಾಮ ಮಧ್ಯಸ್ಥ, ಉದ್ಯಮಿ ವಿಶ್ವನಾಥ್
ಸನಿಲ್, ನೀಲಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಕುಮಾರ್, ಬಿಜೆಪಿ ರಾಜ್ಯ ಎಸ್.ಟಿ ಮೋರ್ಚಾದ ಕಾರ್ಯದರ್ಶಿ ಉಮೇಶ್ ನಾಯ್ಕ, ನೀಲಾವರ ಮಹಿಷಮರ್ಧಿನಿ ದೇವಸ್ಥಾನದ ಅರ್ಚಕ ರಾಘವೇಂದ್ರ ಅಡಿಗ, ಉದ್ಯಮಿ ಧನಂಜಯ ಅಮೀನ್, ಉಡುಪಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಲ್ಲೂಕು
ಪಂಚಾಯಿತಿ ಮಾಜಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಪೂಜಾರಿ, ಕೇದಾರೋತ್ಥಾನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ, ಬ್ರಹ್ಮಾವರ ಕೃಷಿ ಕೇಂದ್ರದ ಡಾ.ಶಂಕರ್, ಸಂತೋಷ್ ಶೆಟ್ಟಿ, ಗುಣಶೀಲ
ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು