ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಲಾಸ್ತಂಭ ಪರಿಗ್ರಹ ಸಮರ್ಪಣಾ ಸಂಕಲ್ಪ

Published 25 ಜೂನ್ 2024, 6:34 IST
Last Updated 25 ಜೂನ್ 2024, 6:34 IST
ಅಕ್ಷರ ಗಾತ್ರ

ಕಾಪು (ಪಡುಬಿದ್ರಿ): ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಶಿಲಾಮಯ ಗರ್ಭಗುಡಿ ಮತ್ತು ಸಂಪೂರ್ಣ ಮಾರಿಗುಡಿಯ ಶಿಲಾಸ್ತಂಭ ಪರಿಗ್ರಹ ಸಮರ್ಪಣಾ ಸಂಕಲ್ಪ ಪೂಜೆ  ಸೋಮವಾರ ನಡೆಯಿತು.

ದೇಗುಲದ ತಂತ್ರಿ ಕೆ.ಪಿ.ಕುಮಾರ ಗುರು ತಂತ್ರಿ ಕೊರಂಗ್ರಪಾಡಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನಡೆದವು.

ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಶಿಲ್ಪಿಗಳು ಮಾರಿಗುಡಿಯ ಮಹಾದ್ವಾರ, ನಾಲ್ಕು ಮಹಾಸ್ತಂಭ, ಮರದ ಕೆತ್ತನೆಯ ಮೇಲ್ಛಾವಣಿಯ ಕರ್ಣ ಮುಚ್ಚಿಗೆ, ಸುತ್ತುಪೌಳಿಯ ಶಿಲಾಸ್ತಂಭಗಳ ಸೇರಿದಂತೆ 86 ಶಿಲಾಸ್ತಂಭಗಳನ್ನು ದಾನಿಗಳಿಗೆ ಹಸ್ತಾಂತರಿಸಿದರು. ಇವುಗಳ ಬೆಲೆ ₹ 4 ಲಕ್ಷದಿಂದ ₹ 2 ಕೋಟಿ ವರೆಗೆ ಇದ್ದು ದಾನಿಗಳು ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.

ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ಕೆ.ರವಿಕಿರಣ್, ಗೌರವಾಧ್ಯಕ್ಷ ಎಂ.ಸುಧಾಕರ್ ಹೆಗ್ಡೆ, ಉಪಾಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ಮನೋಹರ್ ಶೆಟ್ಟಿ ಕಾಪು, ಗೌರವ ಸಲಹೆಗಾರ ನಡಿಕೆರೆ ರತ್ನಾಕರ ಶೆಟ್ಟಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಮಹಾದ್ವಾರದ ದಾನಿ ಕೆ.ಎಂ. ಶೆಟ್ಟಿ, ಮಹಾಸ್ತಂಭದ ದಾನಿ ಪ್ರಭಾಕರ ಜೆ. ಶೆಟ್ಟಿ ಮಂಡಗದ್ದೆ ಇದ್ದರು.

ಇಂದು ಸ್ವರ್ಣ ಸಮರ್ಪಣೆ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಮಾರಿಯಮ್ಮ ದೇವಿ ಮತ್ತು ಉಚ್ಚಂಗಿ ದೇವಿಗೆ ನೂತನ ಸ್ವರ್ಣ ಗದ್ದುಗೆ ನಿರ್ಮಾಣಗೊಳ್ಳಲಿದ್ದು ಸ್ವರ್ಣ ಸಮರ್ಪಣೆಗೆ ಇದೇ 25ರಂದು ಬೆಳಿಗ್ಗೆ ಸ್ವರ್ಣಗೌರಿ ಪೂಜೆಯ ಮೂಲಕ ಚಾಲನೆ ನೀಡಲಾಗುವುದು.
ಭಕ್ತರಿಗೆ 9 ಗ್ರಾಂ, 18 ಗ್ರಾಂ, 99 ಗ್ರಾಂ, 243 ಗ್ರಾಂ, 450 ಗ್ರಾಂ, 999 ಗ್ರಾಂ ಸ್ವರ್ಣ ಸಮರ್ಪಣೆಗೆ ಅವಕಾಶವಿದೆ. ಹೊಸ ಚಿನ್ನದೊಂದಿಗೆ ಬಳಸಿದ ಚಿನ್ನವನ್ನೂ ಸಮರ್ಪಿಸಲು ಅವಕಾಶವಿದೆ ಎಂದು ಅಭಿವೃದ್ಧಿ ಸಮಿತಿಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT