ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಕಳ | ತೈಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

Published 22 ಜೂನ್ 2024, 13:46 IST
Last Updated 22 ಜೂನ್ 2024, 13:46 IST
ಅಕ್ಷರ ಗಾತ್ರ

ಕಾರ್ಕಳ: ರಾಜ್ಯ ಸರ್ಕಾರದ ಬೆಲೆ ಏರಿಕೆ ಜನ ವಿರೋಧಿ ನೀತಿ ಖಂಡಿಸಿ ನಗರದ ಅನಂತಶಯನ ವೃತ್ತದಿಂದ ಬಸ್‌ ನಿಲ್ದಾಣ ತನಕ ಪ್ರತಿಭಟನೆ ನಡೆಯಿತು.

‌ಮಂಡಲ ಬಿಜೆಪಿ ಅಧ್ಯಕ್ಷ ನವೀನ್ ನಾಯಕ್ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಗ್ಯಾರಂಟಿಗಳು ಜನರಿಗೆ ಮಂಕುಬೂದಿ ಎರಚುತ್ತಿವೆ. ಸರ್ಕಾರ ಆರ್ಥಿಕ ಹೊರೆ ತುಂಬಿಸಿಕೊಳ್ಳಲು ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದಂತಾಗುತ್ತದೆ. ಜನರ ಬದುಕಿನಂದಿಗೆ ಸರ್ಕಾರ ಚೆಲ್ಲಾಟವಾಡುವುದು ಸರಿಯಲ್ಲ ಎಂದು ದೂರಿದರು.

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಶ್ಮಾ ಶೆಟ್ಟಿ ಅವರು ಮಾತನಾಡಿ ಚುನಾವಣೆ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಚಿತ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗೆ ಆಮಿಷಗಳನ್ನು ತೋರಿಸಿ ಅಧಿಕಾರಕ್ಕೆ ಬಂದಿದೆ. ನಂತರ ಯೋಜನೆಗಳಿಗೆ ಹಣ ಭರಿಸಲಾಗದೇ ಗಂಡಸರ ಕಿಸೆಯಿಂದ ಕಿತ್ತು ಮಹಿಳೆಯರಿಗೆ ಕೊಡುವ ಕೆಲಸಕ್ಕೆ ಮುಂದಾಗಿದೆ, ಈಗ ಬೆಲೆ ಏರಿಸುವ ಮೂಲಕ ಮಹಿಳೆಯರಿಗೆ ಕೊಟ್ಟಿದೆ ಎಂದು ಆರೋಪಿಸಿದರು.

ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಣಿರಾಜ ಶೆಟ್ಟಿ ಮಾತನಾಡಿ, ರೈತರ ಬದುಕನ್ನು ಸರ್ಕಾರ ಹೈರಾಣಾಗಿಸಿದೆ. ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿದೆ ಎಂದು ದೂರಿದರು.

ತಳ್ಳುಗಾಡಿಗೆ ಬ್ಯಾನ‌ರ್ ಕಟ್ಟುವ ಮೂಲಕ, ಲಾರಿಗೆ ಹಗ್ಗಕಟ್ಟಿ ಎಳೆಯುವ ಮೂಲಕ, ಮಹಿಳೆಯರು ಚೊಂಬು ಹಿಡಿದು ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಮುಖಂಡ ಮಹಾವೀ‌ರ್ ಹೆಗ್ಡೆ, ಸುರೇಶ್ ಶೆಟ್ಟಿ, ಅಂತೋನಿ ಡಿಸೋಜ ನಕ್ರೆ, ಮುಟ್ಲುಪ್ಪಾಡಿ ಸತೀಶ್‌ ಶೆಟ್ಟಿ, ಸೊಜನ್ ಜೇಮ್ಸ್, ಸುಮೀತ್ ಶೆಟ್ಟಿ ಕೌಡೂರು, ಇರ್ವತ್ತೂರು ಉದಯ ಎಸ್‌.ಕೋಟ್ಯಾನ್, ಹರೀಶ್ ನಾಯಕ್ ಅಜೆಕಾರು, ನಿತ್ಯಾನಂದ ಪೈ, ಕೆ.ಪಿ.ಶೆಣೈ, ವಕ್ತಾರ ರವೀಂದ್ರ ಮೊಯಿಲಿ, ನಿಟ್ಟೆ ಪ್ರವೀಣ್‌ ಸಾಲಿಯಾನ್, ಶ್ರೀನಿವಾಸ ಕಾರ್ಲ, ಜಯರಾಂ ಸಾಲಿಯಾನ್, ಗಿರಿಧರ್ ನಾಯಕ್, ಹರೀಶ್ ನಾಯಕ್, ಅನಂತಕೃಷ್ಣ ಶೆಣೈ, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT