ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಲ ಫೌಂಡೇಷನ್ ಯಕ್ಷಗಾನ ಕಲಾವಿದರ ಪಾಲಿಗೆ ಬೆಳಕು: ಉದ್ಯಮಿ ಶೇಡಿಕೋಡ್ಲು ವಿಠಲ

ಯಕ್ಷಗಾನ ಕಲಾವಿದರಿಗೆ ಕಿಟ್ ವಿತರಣೆ
Last Updated 22 ಜೂನ್ 2021, 3:17 IST
ಅಕ್ಷರ ಗಾತ್ರ

ಮಂದಾರ್ತಿ(ಬ್ರಹ್ಮಾವರ): ಯಕ್ಷಧ್ರುವ ಪಟ್ಲ ಫೌಂಡೇಷನ್ ಕೋವಿಡ್‌ ಸಂಕಷ್ಟದ ಕಾಲದಲ್ಲಿ ದಿನಬಳಕೆಯ ಸಾಮಗ್ರಿ ವಿತರಿಸುವ ಮೂಲಕ ಯಕ್ಷಗಾನ ಕಲಾವಿದರ ಪಾಲಿಗೆ ಬೆಳಕಾಗಿದೆ ಎಂದು ಉದ್ಯಮಿ ಶೇಡಿಕೋಡ್ಲು ವಿಠಲ ಶೆಟ್ಟಿ ಹೇಳಿದರು.

ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ಯಕ್ಷಧ್ರುವ ಪಟ್ಲ ಫೌಂಡೇಷನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರಿಗೆ ದಿನಸಿ ಸಾಮಗ್ರಿ ಕಿಟ್ ವಿತರಿಸಿ ಅವರು ಮಾತನಾಡಿದರು. ಲಾಕ್‍ಡೌನ್‍ನಿಂದಾಗಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಧಾರ್ಮಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಧಾರ್ಮಿಕ ಕಾರ್ಯಕ್ರಮದ ಭಾಗವಾಗಿರುವ ಯಕ್ಷಗಾನ ಪ್ರದರ್ಶನವಿಲ್ಲದೆ ಕಲಾವಿದರು ಜೀವನ ನಡೆಸುವುದೇ ಕಷ್ಟವಾಗಿತ್ತು. ಸಂಕಷ್ಟದ ಸಮಯದಲ್ಲಿ ಕಲಾವಿದರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಆಸರೆಯಾಗಿರುವುದು ಶ್ಲಾಘನೀಯ ಎಂದರು.

ಹಿರಿಯ ಕಲಾವಿದ ನರಾಡಿ ಭೋಜರಾಜ ಶೆಟ್ಟಿ ಮಾತನಾಡಿ, ‘ಯಕ್ಷಗಾನ ಪ್ರದರ್ಶನವಿದ್ದಾಗ ಶ್ರೀಮಂತ ಕಲೆಯ ಪ್ರಚಾರಕರಾಗಿ ಕಾಣಿಸಿಕೊಳ್ಳುವ ಕಲಾವಿದರ ಜೀವನ ನಿರ್ವಹಣೆ ಕಷ್ಟದಾಯಕವಾಗಿದೆ. ಒಬ್ಬ ಕಲಾವಿದರಾಗಿ ಕಲಾವಿದರ ನೋವು–ನಲಿವಿನ ಅರಿವಿರುವ ಪಟ್ಲ ಸತೀಶ್ ಶೆಟ್ಟಿ ಅವರು ಯಕ್ಷಗಾನ ಕಲಾವಿದರಿಗೆ ಧ್ವನಿಯಾಗಿದ್ದಾರೆ’ ಎಂದರು.

ಹೆಗ್ಗುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಶೆಟ್ಟಿ, ಮಂದಾರ್ತಿ ದೇವಳದ ಆಡಳಿತ ಸಹ ಮೊಕ್ತೇಸರ ಎಚ್‍. ಪ್ರಭಾಕರ ಶೆಟ್ಟಿ, ಪಟ್ಲ ಫೌಂಡೇಷನ್ ಕಾರ್ಯದರ್ಶಿ ಉದಯಕುಮಾರ ಶೆಟ್ಟಿ ಕೆರೆಕಟ್ಟೆ, ಮೊಗವೀರ ಯುವ ಸಂಘಟನೆ ಸ್ಥಾಪಕಾಧ್ಯಕ್ಷ ಅಶೋಕ್ ಕುಂದರ್, ಭಾಗವತರಾದ ರಾಘವೇಂದ್ರ ಮಯ್ಯ, ಸುರೇಶ್ ಶೆಟ್ಟಿ ಶಂಕರನಾರಾಯಣ, ರಮೇಶ ಮೆಂಡನ್ ಮೊದಲಾದವರು ಇದ್ದರು.

ದಿನಕರ ಕುಂದರ್ ವಂದಿಸಿದರು. ಭಾಗವತ ಸದಾಶಿವ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT