ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಹ್ಮಾವರ: ಮನೆ ನಿರ್ಮಾಣಕ್ಕೆ ಧನಸಹಾಯ ಹಸ್ತಾಂತರ

Published : 27 ಸೆಪ್ಟೆಂಬರ್ 2024, 14:41 IST
Last Updated : 27 ಸೆಪ್ಟೆಂಬರ್ 2024, 14:41 IST
ಫಾಲೋ ಮಾಡಿ
Comments

ಕೋಟ (ಬ್ರಹ್ಮಾವರ): ಕೋಟತಟ್ಟು ಗ್ರಾಮ ಪಂಚಾಯಿತಿಯ ಚಿಟ್ಟಿಬೆಟ್ಟು ಪರಿಶಿಷ್ಟ ಪಂಗಡ ಸಮುದಾಯಕ್ಕೆ 8 ಮನೆ ನಿರ್ಮಾಣಕ್ಕೆ ಕೋಟ ಸಹಕಾರಿ ವ್ಯವಸಾಯಿಕ ಸಂಘದಿಂದ ಮಂಜೂರಾದ ಧನಸಹಾಯವನ್ನು ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ ಮಂಜೂರಾಗಿದ್ದು, ಅನುದಾನ ಕಡಿಮೆಯಾದ್ದರಿಂದ ಪರಿಶಿಷ್ಟ ಪಂಗಡ ಮನೆ ನಿರ್ಮಾಣ ಸಮಿತಿ ಕೋಟ ಸಿ.ಎ ಬ್ಯಾಂಕ್‌ಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಧನಸಹಾಯ ನೀಡಲಾಗಿದೆ ಎಂದು ಅಧ್ಯಕ್ಷ ಕಾಂಚನ್ ತಿಳಿಸಿದರು.

ಸಂಘದ ಉಪಾಧ್ಯಕ್ಷ‌ ಜಿ. ರಾಜೀವ ದೇವಾಡಿಗ, ನಿರ್ದೇಶಕ ಜಿ. ತಿಮ್ಮ ಪೂಜಾರಿ, ಕೆ. ಉದಯ ಕುಮಾರ್ ಶೆಟ್ಟಿ, ಟಿ. ಮಂಜುನಾಥ, ಮಹೇಶ ಶೆಟ್ಟಿ, ರವೀಂದ್ರ ಕಾಮತ್, ರಾಜೇಶ ಉಪಾಧ್ಯ, ಶ್ರೀಕಾಂತ ಶೆಣೈ, ಎಚ್. ನಾಗರಾಜ ಹಂದೆ, ರಂಜಿತ್ ಕುಮಾರ್, ಅಚ್ಯುತ ಪೂಜಾರಿ, ಭಾಸ್ಕರ ಶೆಟ್ಟಿ, ಗೀತಾ ಶಂಭು ಪೂಜಾರಿ, ಪ್ರೇಮಾ ಎಸ್, ರಶ್ಮಿತಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಸುರೇಶ ಕಾಂಚನ್, ಗ್ರಾ.ಪಂ. ಅಧ್ಯಕ್ಷ ಕೆ. ಸತೀಶ ಕುಂದರ್, ಸದಸ್ಯರಾದ ವಾಸು ಪೂಜಾರಿ, ಪ್ರಕಾಶ ಹಂದಟ್ಟು, ವಿದ್ಯಾ ಸಾಲಿಯಾನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಸ್ಥಳೀಯರಾದ ರತ್ನಾಕರ ಪೂಜಾರಿ, ಫಲಾನುಭವಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT