ಕುಂದಾಪುರ: ಕೋಟೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟಿ ಚೆನ್ನಯ ಬಸ್ ತಂಗುದಾಣ ಸಮೀಪದ ಅರಾಲು ಗುಡ್ಡೆ ರಸ್ತೆಯಲ್ಲಿ ಆಟೊ ರಿಕ್ಷಾದಲ್ಲಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಶನಿವಾರ ಹೆಜ್ಜೇನು ದಾಳಿ ನಡೆಸಿದೆ.

ರಾಘವೇಂದ್ರ ಅವರ ಆಟೊದಲ್ಲಿ ಶಾಲೆಗೆ ಹೋಗುತ್ತಿದ್ದ ವೇಳೆ ದಾಳಿ ನಡೆಸಿದ್ದು ಚಾಲಕ ಆರೈಕೆ ಮಾಡಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ದಾಳಿಗೊಳಗಾದ ಮಕ್ಕಳು ಕೋಟೇಶ್ವರದ ಕಿನಾರ ಪರಿಸರದವರು. ಹಂಗಳೂರು ಬಡಾಕೆರೆ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಐವರು ವಿದ್ಯಾರ್ಥಿಗಳು ಹಾಗೂ ರಿಕ್ಷಾ ಚಾಲಕನಿಗೆ ಹೆಜ್ಜೇನು ಕಡಿದಿದೆ. ಒಬ್ಬಳಿಗೆ ಮಾತ್ರ ಒಳರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ಪೂಜಾರಿ ಮತ್ತು ಶಾಲಾ ಶಿಕ್ಷಕರು ಆಸ್ಪತ್ರೆಗೆ ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.