ಶುಕ್ರವಾರ, ಏಪ್ರಿಲ್ 16, 2021
25 °C

ಮಲಬಾರ್‌ನಲ್ಲಿ ಆರ್ಟಿಸ್ಟ್ರಿ ಚಿನ್ನಾಭರಣ ಮಾರಾಟ 6ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಮಲಬಾರ್ ಗೋಲ್ಡ್‌ ಅಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮಾರ್ಚ್‌ 6 ರಿಂದ 14ರವರೆಗೆ ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣ ಮಾರಾಟ ಹಾಗೂ ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆಯ ಗ್ರಾಹಕರ ಸ‌ಂಪರ್ಕಾಧಿಕಾರಿ ರಾಘವೇಂದ್ರ ನಾಯಕ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣ ಪ್ರದರ್ಶನದಲ್ಲಿ ಚಿನ್ನ ಹಾಗೂ ವಜ್ರಾಭರಣಗಳ ಸಂಗ್ರಹ ಇರಲಿದೆ. ಮೈನ್‌ ಸಂಗ್ರಹದಲ್ಲಿ ಪ್ರಮಾಣೀಕೃತ ವಜ್ರಾಭರಣಗಳ ಸಂಗ್ರಹ ಲಭ್ಯವಿದ್ದು, ನವ ವಧುವಿನ ವಿಶಿಷ್ಟ ವಜ್ರಾಭರಣಗಳು ಮಾರಾಟಕ್ಕಿವೆ. ಡಿವೈನ್‌ನಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುವ ಚಿನ್ನಾರಣಗಳ, ಪ್ರಶಿಯಲ್ಲಿ ರುಬಿ, ಎಮರಾಲ್ ಹರಳುಗಳು, ಎಥಿನಿಕ್ಸ್‌ನಲ್ಲಿ ಕುಶಲ ಹಾಗೂ ಸಾಂಪ್ರದಾಯಿಕ ಆಭರಣಗಳು ಮಾರಾಟಕ್ಕಿವೆ ಎಂದರು.

ಎರಾದಲ್ಲಿ ಅನ್ಕಟ್‌ ಡೈಮಂಡ್ಸ್‌ ಹಾಗೂ ಚಿನ್ನಾಭರಣಗಳ ಸಂಗ್ರಹವಿದ್ದರೆ, ಹಾಯ್‌ನಲ್ಲಿ ಯುವತಿಯರ ಮನಸೆಳೆಯುವ ಹಾಗೂ ಸ್ಟಾರ್ಲೆಟ್‌ನಲ್ಲಿ ಮಕ್ಕಳ ಆಭರಣಗಳು ಲಭ್ಯವಿದೆ. ಆರ್ಟಿಸ್ಟ್ರಿ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಚಿನ್ನ ವಿನಿಮಯದಲ್ಲಿ ಶೂನ್ಯ ಕಡಿತ, ಮರು ಖರೀದಿ, ಉಚಿತ ವಿಮೆ, ಸಂಪೂರ್ಣ ಪಾರದರ್ಶಕತೆ, ಉಚಿತ ನಿರ್ವಹಣೆ ಹಾಗೂ ಆಭರಣಗಳು ಹಾಲ್‌ಮಾರ್ಕ್ ಹೊಂದಿದ್ದು, ಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ತಂಜೀಂ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು