ಕೋಟ(ಬ್ರಹ್ಮಾವರ): ಮಂದಾರ್ತಿ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಸಂಭ್ರಮಾಚರಣೆ ಶತಸಾರ್ಥಕ್ಯ ಕಾರ್ಯಕ್ರಮದ ಪ್ರಯುಕ್ತ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಿಬ್ಬಂದಿಗೆ ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ನಡೆದ ‘ಸಹಕಾರಿ ಕ್ರೀಡಾಕೂಟ’ದಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಸಮಗ್ರ ಪ್ರಶಸ್ತಿ ಬಂದಿದೆ.

ಕ್ರೀಡಾಕೂಟದ ಪಥಸಂಚಲನದಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಅವರೊಂದಿಗೆ ಸಂಘದ ಸಿಬ್ಬಂದಿ ಸಮವಸ್ತ್ರ ಧರಿಸಿ ಶಿಸ್ತುಬದ್ಧವಾಗಿ ಭಾಗವಹಿಸಿ, ಪ್ರಥಮ ಬಹುಮಾನ ಪಡೆದುಕೊಂಡರು.

ಮಹಿಳಾ ವಿಭಾಗ: ಹಗ್ಗ ಜಗ್ಗಾಟ, 4x100 ಮೀ. ರಿಲೇ ಓಟ. ಪುರುಷರ ವಿಭಾಗ: ವಾಲಿಬಾಲ್, ಹಗ್ಗ ಜಗ್ಗಾಟ, 4x100 ಮೀ. ರಿಲೇ ಓಟದಲ್ಲಿ ಸಂಘದ ಸಿಬ್ಬಂದಿ (ಪ್ರಥಮ).

ಮಹಿಳಾ ವಿಭಾಗ: ಗುಂಡು ಎಸೆತ, ಲೆಮನ್ ಸ್ಪೂನ್ ಓಟ, 100 ಮೀ. ಮತ್ತು 400 ಮೀ. ಓಟದಲ್ಲಿ ಸಂಘದ ಸಿಬ್ಬಂದಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

ಪುರುಷರ ವಿಭಾಗ: ಜಾವೆಲಿನ್ ಎಸೆತ, 400 ಮೀ. ಓಟದಲ್ಲಿ ಸಂಘದ ಸಿಬ್ಬಂದಿ ಪ್ರಥಮ ಹಾಗೂ ತೃತೀಯ ಸ್ಥಾನ ಗಳಿಸಿ, ಸಮಗ್ರ ಪ್ರಶಸ್ತಿ ಪಡೆದರು.

ಸಂಘದ ಅಧ್ಯಕ್ಷ ಕೃಷ್ಣ ಕಾಂಚನ್, ನಿರ್ದೇಶಕರಾದ ಕೆ.ಉದಯ ಕುಮಾರ್ ಶೆಟ್ಟಿ, ಜಿ.ತಿಮ್ಮ ಪೂಜಾರಿ, ರವೀಂದ್ರ ಕಾಮತ್, ಮಹೇಶ ಶೆಟ್ಟಿ, ರಂಜಿತ್ ಕುಮಾರ್, ತರಬೇತುದಾರ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸುರೇಶ ಕಾಂಚನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.