ಉಡುಪಿ: ಪ್ರಸಕ್ತ ವರ್ಷ ಮಾಹೆಯು ಸಂಶೋಧನೆ ಮತ್ತು ಅಭಿವೃದ್ಧಿಗೆ ₹365 ಕೋಟಿ ಹೂಡಿಕೆ ಮಾಡಲಿದೆ ಎಂದು ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ ಎಂ.ಡಿ. ವೆಂಕಟೇಶ್ ಹೇಳಿದರು.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ಮಣಿಪಾಲದಲ್ಲಿ ಸೋಮವಾರ ಆರಂಭಗೊಂಡ ಮಣಿಪಾಲ ಸ್ಟಾರ್ಟ್ ಅಪ್ ಎಕ್ಸ್ಪೋದಲ್ಲಿ ಅವರು ಮಾತನಾಡಿದರು.

ಐಐಟಿ ದೆಹಲಿ, ಐಐಟಿ ಮದ್ರಾಸ್, ಫಿಲಿಪ್ಸ್, ಎಂಐಟಿ, ಕೆಎಂಸಿ ಹಾಗೂ ಮಣಿಪಾಲ ಆಸ್ಪತ್ರೆಗಳೊಂದಿಗೆ ಮಾಹೆಯ ಸಹ ಪಾಲುದಾರತ್ವದ ಕುರಿತು ಅವರು ವಿವರಿಸಿದರು.

ಬಿಐಆರ್ಎಸಿ ಇಂಕ್ಯುಬೇಶನ್ ಅಧಿಕಾರಿ ಅಪೂರ್ವಾ ಶ್ರೀವಾಸ್ತವ ಮಾತನಾಡಿ, ಸಂಶೋಧನೆಯಿಂದ ವ್ಯಾಪಾರೀಕರಣದವರೆಗೆ ಮಾಹೆ ಅನುಸರಿಸಿರುವ ಸಮಗ್ರ ಕ್ರಮವು ಭಾರತವನ್ನು ಜಾಗತಿಕ ಬಯೋಟೆಕ್ ಹಬ್ ಆಗಿ ರೂಪಿಸಲು ನಮ್ಮ ರಾಷ್ಟ್ರೀಯ ಗುರಿಗೆ ಸಂಪೂರ್ಣ ಹೊಂದಿಕೊಳ್ಳುತ್ತದೆ ಎಂದು ಹೇಳಿದರು.

ಎಕ್ಸ್ಪೋದಲ್ಲಿ ವಿವಿಧ ಕ್ಷೇತ್ರಗಳ ಪರಿಣತ ತಜ್ಞರಿಂದ ಉಪನ್ಯಾಸಗಳ ಸರಣಿ ನಡೆಯಿತು. ಡಾ.ಕೆ. ಮೋಹನ್ ವೇಲು ಮಾತನಾಡಿದರು. ಡಾ. ರಾಜಕುಮಾರ್ ಆಳಂದ್, ಸಂಕೀರ್ಣ ಪೈ, ಡಾ. ಮನೇಶ್ ಥಾಮಸ್ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.