ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೈದಿಗೆ ನೀಡಲು ತಂದಿದ್ದ ಬಿಸ್ಕೆಟ್, ಹಣ್ಣು ಜೊತೆ ಗಾಂಜಾ ಪತ್ತೆ

Published 21 ಮೇ 2024, 14:13 IST
Last Updated 21 ಮೇ 2024, 14:13 IST
ಅಕ್ಷರ ಗಾತ್ರ

ಉಡುಪಿ: ಹಿರಿಯಡ್ಕದ ಜಿಲ್ಲಾ ಕಾರಾಗೃಹದಲ್ಲಿನ ವಿಚಾರಣಾ ಕೈದಿಯೊಬ್ಬರಿಗೆ ನೀಡಲು ತಂದಿದ್ದ, ಬಿಸ್ಕೆಟ್, ಹಣ್ಣುಗಳ ಬ್ಯಾಗ್‌ನಲ್ಲಿ ಗಾಂಜಾ ಪತ್ತೆಯಾಗಿದ್ದು ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಚಾರಣಾ ಕೈದಿ ರೇವುನಾಥ್ ಅಲಿಯಾಸ್ ಪ್ರೇಮನಾಥ್ ಎಂಬುವರ ಸಂದರ್ಶನಕ್ಕೆ ಆತನ ಸ್ನೇಹಿತರಾದ ಸುದೀಶ್, ವರುಣ್ ಎಂಬುವರು ಮೇ 20ರಂದು ಜಿಲ್ಲಾ ಕಾರಾಗೃಹಕ್ಕೆ ಬಂದಿದ್ದರು. ಈ ವೇಳೆ ಖೈದಿಗೆ ನೀಡಲೆಂದು ಬಿಸ್ಕೆಟ್, ಹಣ್ಣು ತಂದಿದ್ದರು. ಮುಖ್ಯದ್ವಾರದ ಸಿಬ್ಬಂದಿಯಲ್ಲಿ ಅದನ್ನು ನೀಡಿ ಸಂದರ್ಶನ ಕೊಠಡಿಗೆ ತೆರಳಿದ್ದರು.

ವಸ್ತುಗಳನ್ನು ಸಹಾಯಕ ಜೈಲರ್, ದ್ವಾರಪಾಲಕ, ದ್ವಾರ ಸಹಾಯಕ ಬ್ಯಾಗ್‌ ಪರಿಶೀಲಿಸಿದಾಗ ಹಣ್ಣು, ಬಿಸ್ಕೆಟ್ ನಡುವೆ ಪ್ಲಾಸ್ಟಿಕ್ ತೊಟ್ಟೆಯಲ್ಲಿ 10ರಿಂದ 15 ಗ್ರಾಂ ನಷ್ಟು ಗಾಂಜಾದಂತೆ ತೋರುವ ಸೊಪ್ಪು ಕಂಡು ಬಂದಿದೆ. ನಿಷೇಧಿತ ವಸ್ತುಗಳನ್ನು ಕಾರಾಗೃಹ ಒಳಗಡೆ ನುಸುಳಿಸಲು ಪ್ರಯತ್ನಿಸಿದ ವ್ಯಕ್ತಿಗಳ ವಿರುದ್ದ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT