ಮಂಗಳವಾರ, ಮೇ 24, 2022
22 °C

ಉಡುಪಿ: ಸರಳ ಮಿಲಾದುನ್ನಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪ್ರವಾದಿ ಮುಹಮ್ಮದ್ ಮುಸ್ತಫಾ ಅವರ ಜನ್ಮದಿನಾಚರಣೆ ಪ್ರಯುಕ್ತ ಮಿಲಾದುನ್ನಬಿಯನ್ನು ಜಿಲ್ಲೆಯ ಮಸೀದಿಗಳಲ್ಲಿ ಮಂಗಳವಾರ ಸರಳವಾಗಿ ಆಚರಿಸಲಾಯಿತು.

ಉಡುಪಿ ತಾಲ್ಲೂಕಿನ ದೊಡ್ಡಣಗುಡ್ಡೆ, ಹೂಡೆ, ನೇಜಾರು, ಕುಂದಾಪುರ, ಶಿರೂರು, ಕೋಡಿ, ಕಾರ್ಕಳ, ಕಾಪುವಿನ ಹೆಜಮಾಡಿ, ಪಡುಬಿದ್ರಿ, ಪಲಿಮಾರು, ಎರ್ಮಾಳು, ಮುದರಂಗಡಿ, ಉಚ್ಚಿಲ, ಮೂಳೂರು, ಕಾಪು, ಕಟಪಾಡಿ, ಮಜೂರು, ಮಲ್ಲಾರು, ಶಿರ್ವ, ಮಣಿಪುರ ಸೇರಿದಂತೆ ಹಲವು ಮಸೀದಿಗಳಲ್ಲಿ ಮಿಲಾದುನ್ನಬಿ ಆಚರಿಸಲಾಯಿತು.ಕೋವಿಡ್ ಹಿನ್ನೆಲೆಯಲ್ಲಿ ರ‍್ಯಾಲಿ ರದ್ದುಪಡಿಸಲಾಗಿತ್ತು.

ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಿಗ್ಗೆ ವೌಲಿದ್ ಮಜ್ಲೀಸ್ ನಡೆಯಿತು. ಮದರಸಗಳ ಪ್ರವಾದಿ ಸಂದೇಶಗಳನ್ನು ಒಳಗೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ದೊಡ್ಡಣಗುಡ್ಡೆ ರಹ್ಮಾನಿಯಾ ಜುಮಾ ಮಸೀದಿಯಲ್ಲಿ ರಿಫಾಯಿಯ ಯಂಗ್‌ಮೆನ್ಸ್‌ ಸಂಘಟನೆಯಿಂದ ಅಂಗವಿಕಲ ವಿದ್ಯಾರ್ಥಿ ಸ್ವರೂಪ್‌ಗೆ ಸೈಕಲ್ ವಿತರಣೆ ಮಾಡಲಾಯಿತು. ಇದೇವೇಳೆ ಹೆಲ್ಪ್ ಡೆಸ್ಕ್ ಉದ್ಘಾಟಿಸಲಾಯಿತು. ‌

ಈ ಸಂದರ್ಭ ಮಸೀದಿ ಖತೀಬ್ ನಝೀರ್ ಅಹ್ಮದ್ ಸಹದಿ, ಅಧ್ಯಕ್ಷ ಹಾಜಿ ಕೆಎಸ್ಎಂ ಅಬ್ದುಲ್ ಖಾದರ್, ಯಂಗ್‌ಮೆನ್‌ ಅಧ್ಯಕ್ಷ ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು. ಮೀಲಾದುನ್ನಬಿ ಪ್ರಯುಕ್ತ ಮಸೀದಿಯಲ್ಲಿ ವೌಲಿದ್ ಮಜ್ಲೀಸ್, ನಂತರ ಹಝ್ರತ್ ಅಶೇಖ್ ಅಹ್ಮದ್ ಅಲ್ಹಾದಿ ಅವರ ದರ್ಗಾ ಝಿಯಾರತ್ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.