ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಸ್ತಾನ | ಕಡಲ್ಕೊರೆತ ಪ್ರದೇಶಗಳಿಗೆ ಶಾಸಕ ಕೊಡ್ಗಿ ಭೇಟಿ

Published 2 ಜುಲೈ 2024, 14:42 IST
Last Updated 2 ಜುಲೈ 2024, 14:42 IST
ಅಕ್ಷರ ಗಾತ್ರ

ಸಾಸ್ತಾನ (ಬ್ರಹ್ಮಾವರ): ತಾಲ್ಲೂಕಿನ ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಿ ಹೊಸಬೇಂಗ್ರೆ ಸಹಿತ ವಿವಿಧ ಕಡಲ್ಕೊರೆತ ಪ್ರದೇಶಗಳಿಗೆ ಶಾಸಕ ಕಿರಣ್‌ ಕುಮಾರ್ ಕೊಡ್ಗಿ ಮಂಗಳವಾರ ಭೇಟಿ ನೀಡಿ ಮಾಹಿತಿ ಪಡೆದರು.

ಅವರು ಮಾಹಿತಿ ನೀಡಿ, ಎಲ್ಲೆಲ್ಲಿ ಕಡಲ್ಕೊರೆತ ನಡೆದಿದೆ ಆ ಸ್ಥಳಗಳ ಬಗ್ಗೆ ಸರ್ಕಾರ, ಸಚಿವರ ಗಮನ ಸೆಳೆದು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಶ್ರಮಿಸುವುದಾಗಿ ತಿಳಿಸಿದರು.

ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಲ ಕಿನಾರೆಯಲ್ಲಿ ತಲೆ ಎತ್ತಿದ ರೆಸಾರ್ಟ್‌ಗಳ ಬಗ್ಗೆ ಮಾಹಿತಿ ಪಡೆದ ಶಾಸಕರು, ಕಿನಾರೆಯ ರಸ್ತೆ ಅಂಚಿನಲ್ಲಿ ಕಂಪೌಂಡ್ ನಿರ್ಮಾಣದ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸಿದರು.

ಕೋಡಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಖಾರ್ವಿ, ಸದಸ್ಯರಾದ ಕೃಷ್ಣ ಪೂಜಾರಿ ಪಿ, ಸತೀಶ ಜಿ.ಕುಂದರ್, ಮೀನುಗಾರ ಮುಖಂಡರಾದ ಲಕ್ಷ್ಮಣ್ ಸುವರ್ಣ, ಮಹಾಬಲ ಕುಂದರ್, ಸುಧೀರ ಕುಂದರ್, ರಾಘವೇಂದ್ರ ಸುವರ್ಣ, ಮಾಜಿ ಉಪಾಧ್ಯಕ್ಷ ಅಣ್ಣಪ್ಪ ಕುಂದರ್, ಮೀನುಗಾರಿಕಾ ಇಲಾಖೆಯ ಸಹಾಯಕ ಎಂಜಿನಿಯರ್ ಡಯಾಸ್, ಭಾನುಪ್ರಕಾಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT