ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೀನುಗಾರರಿಂದ ಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಸನ್ಮಾನ

Published 11 ಆಗಸ್ಟ್ 2024, 14:19 IST
Last Updated 11 ಆಗಸ್ಟ್ 2024, 14:19 IST
ಅಕ್ಷರ ಗಾತ್ರ

ಕೋಟ (ಬ್ರಹ್ಮಾವರ): ಕೋಟ ಕೋಡಿ–ಬೀಜಾಡಿ ವಲಯದ ಮೀನುಗಾರ ಪ್ರಮುಖರು, ಬೋಟ್ ಮಾಲೀಕರು, ಟ್ರಾಲ್ ಬೋಟ್ ತಾಂಡೇಲರ ಸಂಘದ ವತಿಯಿಂದ ಮತ್ಸ್ಯೋದ್ಯಮಿ ಆನಂದ ಸಿ.ಕುಂದರ್ ನೇತೃತ್ವದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ಹಂಗಾರಕಟ್ಟೆ, ಕೋಡಿ ಕನ್ಯಾನ ಬಂದರು ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಕೃಷ್ಣ ಕುಂದರ್, ಸ್ಥಾಪಕಾಧ್ಯಕ್ಷ ಗಣೇಶ ಕುಂದರ್, ರಾಜೇಂದ್ರ ಸುವರ್ಣ, ಕೋಟತಟ್ಟು ಗ್ರಾ.ಪಂ. ಸದಸ್ಯ ರವೀಂದ್ರ ತಿಂಗಳಾಯ, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ಕೃಷ್ಣ ಕಾಂಚನ್, ಶ್ರೀನಿವಾಸ ತಿಂಗಳಾಯ, ಬಸವ ಕುಂದರ್, ಸಿದ್ಧಿ ಶ್ರೀನಿವಾಸ ಪೂಜಾರಿ, ನಾಗೇಶ ಮೆಂಡನ್, ಗೋಪಾಲ ಪೂಜಾರಿ, ರಾಜು ಅಮೀನ್, ದಿನೇಶ ಶ್ರೀಯಾನ್, ಗಣೇಶ ತಿಂಗಳಾಯ, ಅರುಣ್ ಮೆಂಡನ್, ಮೀನುಗಾರ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT