ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಎನ್‌ಬಿ ಟ್ರೋಫಿ ಕ್ರಿಕೆಟ್ ಟೂರ್ನಿ: ಉಪ್ಪಳ ಪ್ರೆಂಡ್ಸ್ ಪ್ರಥಮ

Published 21 ಮೇ 2024, 16:10 IST
Last Updated 21 ಮೇ 2024, 16:10 IST
ಅಕ್ಷರ ಗಾತ್ರ

ಹೆಬ್ರಿ: ಮುದ್ರಾಡಿ ಪರಿಸರದಲ್ಲಿ ಸಾಮಾಜಿಕ, ಕ್ರೀಡಾ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಬಲ್ಲಾಡಿ ಈಶ್ವರ ನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ನಡೆದ ‘ಇಎನ್‌ಬಿ ಟ್ರೋಫಿ–2024’ ಕ್ರಿಕೆಟ್ ಟೂರ್ನಿಯಲ್ಲಿ ಉಪ್ಪಳ ಫ್ರೆಂಡ್ಸ್‌ ಪ್ರಥಮ ಪ್ರಶಸ್ತಿ ಗೆದ್ದುಕೊಂಡಿತು.

ಕಬ್ಬಿನಾಲೆ ಫ್ರೆಂಡ್ಸ್ ದ್ವಿತೀಯ, ಸುಶಾಂತ್ ಫ್ರೆಂಡ್ಸ್ ತೃತೀಯ, ಇಎನ್‌ಬಿ 5ನೇ ಸ್ಥಾನ ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಬರ್ಸ ಬೆಟ್ಟು ಸುಧಾಕರ ಶೆಟ್ಟಿ, ಗಣಪತಿ ಎಂ, ವಿಶು ಕುಮಾರ್ ಉಪ್ಪಳ, ಟ್ರೋಫಿ ಪ್ರಾಯೋಜಕ ಸತೀಶ್ ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ ಪೂಜಾರಿ, ಸಂಘಟನಯ ಅಧ್ಯಕ್ಷ ಸಂತೋಷ ಕುಲಾಲ್, ಮನೋಹರ್ ಹೆಗ್ಡೆ ಪ್ರಶಸ್ತಿ ವಿತರಿಸಿದರು. ಪ್ರಶಾಂತ್ ಪೈ ಮುದ್ರಾಡಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT