ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ: ನಾರಾಯಣ ಗುರು ಜನ್ಮ ದಿನಾಚರಣೆ

Last Updated 11 ಸೆಪ್ಟೆಂಬರ್ 2022, 2:31 IST
ಅಕ್ಷರ ಗಾತ್ರ

ಕಾರ್ಕಳ: ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ನಾರಾಯಣ ಗುರು ಜನ್ಮದಿನ ಆಚರಿಸಲಾಯಿತು.

ಉದ್ಘಾಟಿಸಿದ ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಅವರು ಮಾತನಾಡಿ ‘ದಾರ್ಶನಿಕ ಪುರುಷ ಬ್ರಹ್ಮಶ್ರೀ ನಾರಾಯಣ ಗುರು ತನ್ನ ಅದ್ವೈತ ಪ್ರತಿಪಾದನೆಯ ಮಾರ್ಗರ್ದಶನದ ಮೂಲಕ ಎಲ್ಲರ ಸಮಾನತೆಗೆ ಕರೆಕೊಟ್ಟವರು. ಮನುಷ್ಯ ಮನುಷ್ಯನ ನಡುವಿನ ದ್ವೈತ ರಹಿತವಾದ ಮನಸ್ಸು ಸಮಾಜದ ಶಾಂತಿ ಸಮಾನತೆ ಮತ್ತು ಸೌಹಾರ್ದತೆಗೆ ಕಾರಣವಾಗುತ್ತದೆ ಎಂದ ಅವರ ಬೋಧನಯ ಹಿಂದೆ ವಿಶ್ವಕುಟುಂಬ ಚಿಂತನೆಯ ಸತ್ವ ಅಡಗಿದೆ. ಸಾಮಾಜಿಕ ತುಳಿತಕ್ಕೊಳಗಾದ ಮಂದಿಗೆ ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಿ ಎಂದು ಕರೆಕೊಟ್ಟ ಅವರು ಸಮಾಜ ಎನ್ನುವುದು ಯಾರೊಬ್ಬನ ಆಸ್ತಿಯೂ ಅಲ್ಲ. ದೇವರು ಎಂಬವನು ಯಾರೋ ಒಬ್ಬನಿಗಾಗಿ ಇರುವವನಲ್ಲ ಎನ್ನುತ್ತಲೇ ಶೂದ್ರರಿಗಾಗಿ ಶೂದ್ರ ಶಿವನನ್ನು ಸೃಷ್ಟಿಸಿ ಪೂಜಿಸಿದ ಅವಧೂತ ಎಂದರು.

ಅಧ್ಯಕ್ಷತೆ ವಹಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಮಾತನಾಡಿ ನಾರಾಯಣ ಗುರುಗಳು ಧ್ವನಿ ಇಲ್ಲದವರಿಗೆ ಧ್ವನಿ ಕೊಟ್ಟ ಮಹಾಸಂತ ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಉಡುಪಿ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಕೆಪಿಸಿಸಿ ಕಿಸಾನ್ ಘಟಕದ ಕಾರ್ಯದರ್ಶಿ ಉದಯ ಶೆಟ್ಟಿ, ನಗರಾಧ್ಯಕ್ಷ ಮಧುರಾಜ್ ಶೆಟ್ಟಿ, ಸುಭೀತ್ ಕುಮಾರ್, ಬ್ಲಾಕ್ ವಕ್ತಾರ ಶುಭದಾ ರಾವ್, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಆರೀಫ್ ಕಲ್ಲೊಟ್ಟೆ, ಪುರಸದಸ್ಯರಾದ ಸೀತಾರಾಮ್, ಪ್ರತಿಮಾ ರಾಣೆ, ಕುಕ್ಕುಂದೂರು ಗ್ರಾಮಾಧ್ಯಕ್ಷ ಥೋಮಸ್ ಮಸ್ಕರೇನಸ್, ಸತೀಶ್, ನಗರ ಮಹಿಳಾಧ್ಯಕ್ಷೆ ಕಾಂತಿ ಶೆಟ್ಟಿ, ಸುನೀಲ್ ಕೋಟ್ಯಾನ್, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಮಹಮ್ಮದ್ ಅಸ್ಲಾಂ, ಸೇವಾದಳದ ಶೇಖ್ ಅಬ್ದುಲ್ ಸಾಹೇಬ್, ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ ಭಂಡಾರಿ, ಸತೀಶ್ ರಾವ್, ಸುನೀಲ್ ಭಂಡಾರಿ, ಶೋಭಾ, ಆಕಾಶ್ ಪೂಜಾರಿ ಹಾಗೂ ಇತರರು ಇದ್ದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT