ಸೋಮವಾರ, ಆಗಸ್ಟ್ 8, 2022
22 °C
ಉಪ್ಪೂರು ಗ್ರಾಮದ 20 ಎಕರೆಯಲ್ಲಿ ಭತ್ತ ಬೆಳೆ: ಶಾಸಕ ರಘುಪತಿ ಭಟ್

ಹಡಿಲು ಭೂಮಿಯಲ್ಲಿ ಹಸಿರು ನಾಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬ್ರಹ್ಮಾವರ: ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆ, ಪ್ರಾಕೃತಿಕ ವಿಕೋಪದಂತಹ ಅನೇಕ ಸಮಸ್ಯೆಗಳಿಂದ ಸಾವಿರಾರು ಎಕರೆ ಕೃಷಿ ಭೂಮಿ ಹಡಿಲು ಬಿದ್ದಿದೆ. ಈ ಹಡಿಲು ಭೂಮಿಯಲ್ಲಿ ಕೃಷಿ ಮಾಡುವುದರಿಂದ ಆಹಾರೋತ್ಪನ್ನ ಹೆಚ್ಚಳವಾಗುತ್ತದೆ. ಅಂತರ್ಜಲ ವೃದ್ಧಿ, ಪ್ರಕೃತಿಯೂ ಉತ್ತಮವಾಗಿರುತ್ತದೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಕೇದಾರೋತ್ಥಾನ ಟ್ರಸ್ಟ್ ಹಡಿಲು ಭೂಮಿ ಕೃಷಿ ಅಂದೋಲನದಡಿ ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮುಂಜೆಯಲ್ಲಿ ಸೋಮ
ವಾರ ಸುಮಾರು 20 ಎಕರೆ ಹಡಿಲು ಭೂಮಿಯಲ್ಲಿ ಭತ್ತ ನಾಟಿಗೆ ಚಾಲನೆ ನೀಡಿ, ಅವರು ಮಾತನಾಡಿದರು. ಯೋಜನೆಯಿಂದ ಈ ವರ್ಷ ಯಶಸ್ಸು ಸಿಕ್ಕಿದಲ್ಲಿ ಮುಂದಿನ ವರ್ಷ ಇನ್ನಷ್ಟು ಹಡಿಲು ಭೂಮಿಯನ್ನು ಗುರುತಿಸಿ ಕೃಷಿ ಕಾರ್ಯ ಮಾಡಲಾಗುವುದು. ರೈತರೇ ಮುಂದಿನ ವರ್ಷದಿಂದ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದರೊಂದಿಗೆ ಕೇದಾರೋ
ತ್ಥಾನ ಟ್ರಸ್ಟ್ ವತಿಯಿಂದ ಯಂತ್ರೋಪಕರಣಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು ಎಂದರು.

ಇದಕ್ಕೂ ಮುನ್ನ ಕೊಳಲಗಿರಿ ಅಮ್ಮುಂಜೆ ಚರ್ಚ್‌ನ ಧರ್ಮಗುರು ಪ್ರಕಾಶ್ ಅನಿಲ್ ಕ್ರಾಸ್ತಲಿನೊ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಶಾಸಕ ಕೆ. ರಘುಪತಿ ಭಟ್ ಅವರು ಭೂ ಮಾತೆಗೆ ಹಾಲನ್ನು ಅರ್ಪಿಸಿ ಬಳಿಕ ಎಲ್ಲರೂ ನೇಜಿ ನೆಡುವ ಮೂಲಕ ಚಾಲನೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾ ಆಚಾರ್, ಕೇದಾರೋತ್ಥಾನ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ, ಸದಸ್ಯರಾದ ದಿನಕರ್ ಬಾಬು, ಪ್ರತಾಪ್ ಹೆಗ್ಡೆ ಮಾರಾಳಿ, ಮಹೇಶ್ ಠಾಕೂರ್, ಬಿರ್ತಿ ರಾಜೇಶ್ ಶೆಟ್ಟಿ, ಕೊಳಲಗಿರಿ ವಾರ್ಡ್ ಸದಸ್ಯರಾದ ಅಶ್ವಿನ್, ಸತೀಶ್, ರಾಜಶ್ರೀ, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಶಂಕರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು