ಪಡುಬಿದ್ರಿ: ಜೀರ್ಣೋದ್ಧಾರಗೊಳ್ಳುತ್ತಿರುವ ಇಲ್ಲಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ದೈವಶಕ್ತಿಗಳ ಧಾರ್ಮಿಕ ವಿಧಿವಿಧಾನಗಳು ಭಾನುವಾರ ಜರುಗಿದವು.

ದೇವಸ್ಥಾನದ ತಂತ್ರಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ನೇತೃತ್ವದಲ್ಲಿ ವಿಧಿವಿಧಾನಗಳು ನಡೆದವು. ದೇವಾಲಯದ ಪುನರ್ನಿರ್ಮಾಣ ಕಾರ್ಯಗಳು ನಡೆಯುತ್ತಿರುವಂತೆಯೆ ದೇವಸ್ಥಾನದ ಬಡಗು ಭಾಗದ ಪುಷ್ಕರಣಿ ತಟದಲ್ಲಿ ಪುನರ್ ಪ್ರತಿಷ್ಠಾಪನೆ ನಡೆಯಲಿದೆ. ನೂತನ ದೇಗುಲದ ಆಗ್ನೇಯ ಭಾಗದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಯಾಗ ಮಂಟಪಕ್ಕಾಗಿ ದೈವಗಳ ನೆಲೆ, ಪಂಚದೈವಿಕ ಶಕ್ತಿಗಳನ್ನು ವಾಸ್ತು ಶಾಸ್ತ್ರಜ್ಞರ ಅಭಿಮತದಂತೆ ಸ್ಥಳಾಂತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ಸುರೇಂದ್ರ ಉಪಾಧ್ಯಾಯ ಕಂಬ್ಳಕಟ್ಟ, ದೇವಸ್ಥಾನ ಅರ್ಚಕರಾದ ಪದ್ಮನಾಭ ಭಟ್ ಹೆಜಮಾಡಿ, ವೈ. ಗುರುರಾಜ ಭಟ್, ಕೃಷ್ಣಾಪುರ ಶಾಖಾ ಮಠದ ಶ್ರೀನಿವಾಸ ಉಪಾಧ್ಯಾಯ, ದೇವಸ್ಥಾನದ ಆನುವಂಶಿಕ ಮೊಕ್ತೇಸರ ಭವಾನಿಶಂಕರ ಹೆಗ್ಡೆ ಪೇಟೆಮನೆ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಕಾರ್ಯದರ್ಶಿಗಳಾದ ಶ್ರೀನಾಥ್ ಹೆಗ್ಡೆ, ವೈ. ಸುಕುಮಾರ್, ಪದಾಧಿಕಾರಿಗಳಾದ ನವೀನ್ಚಂದ್ರ ಜೆ. ಶೆಟ್ಟಿ, ಪ್ರಕಾಶ್ ದೇವಾಡಿಗ, ಸುರೇಶ್ ಶೆಟ್ಟಿ ಗುಂಡ್ಲಾಡಿ, ನವೀನ್ ಎನ್. ಶೆಟ್ಟಿ, ಶೀನ ಪೂಜಾರಿ, ಸುರೇಶ್, ಪೇಟೆಮನೆ ಅನಿಲ್ ಹೆಗ್ಡೆ, ವಿಜಯ ಹೆಗ್ಡೆ, ಮುರಳಿ ನಾಥ ಶೆಟ್ಟಿ, ಮಾಧವ ಶೆಟ್ಟಿ, ಜಿತೇಂದ್ರ ಶೆಟ್ಟಿ ಪಾಂಡ್ಯಾರು ಬರ್ಪಾಣಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.