‘ಕನಕ ಭವನ ನಿರ್ಮಾಣಕ್ಕೆ ಪ್ರಮಾಣಿಕ ಪ್ರಯತ್ನ’
ಕನಕದಾಸರ ಭಕ್ತಿ ಸಂಧಿಗ್ಧತೆಗೆ ಶ್ರೀಕೃಷ್ಣನೇ ದರ್ಶನ ನೀಡಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇಂದಿಗೂ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರು ಪ್ರಥಮವಾಗಿ ಕನಕನ ಕಿಂಡಿಯ ದರ್ಶನ ಪಡೆದು ಬಳಿಕ ಕೃಷ್ಣನ ದರ್ಶನ ಪಡೆಯುತ್ತಾರೆ. ಜಿಲ್ಲೆಯಲ್ಲಿ ಕನಕ ಭವನ ನಿರ್ಮಾಣ ಮಾಡಬೇಕು ಎಂಬ ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟು ಮುಂದೆ ಕನಕ ಭವನದಲ್ಲಿಯೇ ಕನಕ ಜಯಂತಿ ಆರಿಸುವಂತಾಗಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಯಶ್‌ಪಾಲ್ ಸುವರ್ಣ ಭರವಸೆ ನೀಡಿದರು.