ಗುರುವಾರ , ಆಗಸ್ಟ್ 5, 2021
21 °C

ವಿಶ್ವ ಕುಂದಾಪ್ರ ಕನ್ನಡ ಹನಿಗವನ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬ್ರಹ್ಮಾವರ: ಆಟಿ ಅಮಾವಾಸ್ಯೆಯಂದು ಆಚರಿಸುವ ‘ವಿಶ್ವ ಕುಂದಾಪ್ರ ಕನ್ನಡ ದಿನ’ದ ಪ್ರಯುಕ್ತ ‘ನಮ್ಮೂರು ಬಾರ್ಕೂರು ಫೇಸ್‌ಬುಕ್ ಗ್ರೂಪ್’ ವತಿಯಿಂದ ಗ್ರೂಪ್‌ನ ಸದಸ್ಯರಿಗೆ ಹಮ್ಮಿಕೊಂಡಿದ್ದ ಕುಂದಾಪ್ರ ಕನ್ನಡ ಹನಿಗವನ ಸ್ಪರ್ಧೆಗೆ ಉತ್ತಮ ಸ್ಪಂದನೆ ದೊರೆಯಿತು.

ವಾಣಿ ಶೆಟ್ಟಿ ಪ್ರಥಮ, ರಾಘವೇಂದ್ರ ಶೆಟ್ಟಿ ಬೈಲುಮನೆ ದ್ವಿತೀಯ ಮತ್ತು ತುಳಸಿ ಭಟ್(ಸಿಂಧು ಭಾರ್ಗವ್) ತೃತೀಯ ಬಹುಮಾನ ಪಡೆದರು.

ಈ ಮೂವರ ಆಯ್ದ ಹನಿಗವನಗಳು ಹೀಗಿವೆ

ವಾಣಿ ಶೆಟ್ಟಿ ಅವರ ‘ಆವತ್ತೊಂದಿನ ಕಡ್ಲ್ ಬದಿ ತಿರ್ಗುವತಿಗ್ ಅಲಿಗಳನ್ ಕೇಂಡಿ’

ಅವ ಎಂಥಕ್ ನಂಗ್ ಸಿಕ್ಲ ಅಂದಳಿ

ಅವ್ ಮಾತಾಡ್ದಿದ್ದನ್ ಕಂಡ್ ಸುಮ್ನೆ ಬಂದಿ

ಆರೆ ಅವ್ ಇವತ್ತಿಗೂ ಭೋರ್ಗುಡ್ತಿದ್ದೋ ಅಲ್ !

ರಾಘವೇಂದ್ರ ಶೆಟ್ಟಿ ಬೈಲುಮನೆ ಅವರ

ಕೋಳಿಮರಿ ಕಣ್ಣ್ ಕಂಡಂಗಿದ್ದ್ ಅವ್ಳ್ ಕಣ್ಣ್

ಮಳ್ಲೆಡಿ ಕಂಡಂಗಿದ್ದ್ ಕಣ್ಣ್ ರೆಪ್ಪಿ

ಹಲ್ಸಿನಣ್ಣ್ ಸೊಳಿ ಕಂಡಂಗಿದ್ದ್ ಮೂಗಿನ್ ಸೊಳಿ

ಮುರಿನಣ್ಣ್ ಹಾಕಿ ತೇಪದ್ದ್ ತುಟಿ

ಸ್ಟೀಲ್ ಚಮ್ಚದ್ ಕಂಡಂಗೆ ಪಳ ಪಳ ಹೊಳು ಅವ್ಳ್ ಹಲ್ಲ್

ಕಲ್ಸಿ ಇಟ್ಟ್ ಚಪ್ಪತಿ ಹಿಟ್ಟ್ ಕಂಡಂಗಿದ್ದ್ ಅವ್ಳ್ ಕೆನ್ನಿ

ಅವ್ಳೇ ನನ್ನ್ ಒಣ್ಕಟಿ ಹೆಣ್ಣ್

ನೀವ್ಯಾರೂ ಹಾಕ್ಬೆಡಿ ಕಣ್ಣ್ ಬೈಲ್ಮನಿ ಗಂಡ್

ತುಳಸೀ ಭಟ್ (ಸಿಂಧು ಭಾರ್ಗವ್) ಅವರ ಅವ ಹಶಿ ಹಶಿ ಕಳ್ಳ

ಬೆಳ್ಗಿನ್ ಜಾಮಕೇ ಮನಿ ಕಣ್ಣಕ್

ಬಪ್ಪು ಕೆಂಪ್ ಕಣ್ಣಿನ್ ಕುಪ್ಳ

ನನ್ನೇ ಕದ್ ಕದ್ ಕಾಂಬುದ್

ಹಲ್ ಕಿಸ್ಕಂಡ್ ನಗಾಡುದ್

ಮನ್ಸೊಳಗ್ ಏಗಳ್ ಬಂದ ಅಂದೇ ಗೊತ್ತಾಯ್ಲ

ಪಿರಾಣವೇ ಬೆಚ್ಕಂಡಿದಾ !!

ಇನ್, ದೂರ ಮಾಡುಕ್ ಆತಿಲ್ಲ!!

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.