ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಗತ ಶಿಕ್ಷಣ, ಕೌಶಲ ತರಬೇತಿ ಕಾರ್ಯಾಗಾರ 1ರಂದು

Last Updated 24 ಮಾರ್ಚ್ 2023, 15:42 IST
ಅಕ್ಷರ ಗಾತ್ರ

ಉಡುಪಿ: ಮೈಟ್ರೂ ಸ್ಕಿಲ್ಸ್‌ ಹಾಗೂ ಆಸರೆ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಏ.1ರಂದು ಬೆಳಿಗ್ಗೆ 9 ಗಂಟೆಗೆ ಮಣಿಪಾಲದ ವಿಶ್ವವಿದ್ಯಾಲಯದ ಇಂಟರಾಕ್ಟ್‌ ಹಾಲ್‌ನಲ್ಲಿ ಅಂತರ್ಗತ ಶಿಕ್ಷಣ ಹಾಗೂ ಕೌಶಲ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ಮೈಟ್ರೂ ಸ್ಕಿಲ್ಸ್‌ನ ಸಿಒಒ ಸ್ಮಿತಾ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶೇಷ ಮಕ್ಕಳ ಶಿಕ್ಷಕರು, ಪೋಷಕರು, ಪಾಲನೆ ಪೋಷಣೆ ಮಾಡುತ್ತಿರುವ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಸಬೇಕು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗಿಕ ಎನ್‌ಜಿಒ ಮೂಲಕ ವಿಶೇಷ ಚೇತನ ಮಕ್ಕಳ ಸೇವೆ ಮಾಡುತ್ತಿರುವ ಡಾ.ನೀನಾ ರಾವ್‌ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ವಿಶೇಷ ಚೇತನ ಮಕ್ಕಳೇ ರಚಿಸಿರುವ ಕಥೆ, ಕವನ ಹಾಗೂ ಚಿತ್ರಗಳನ್ನು ಒಳಗೊಂಡಿರುವ ಡಾ.ನೀನಾ ಅವರ ಮೈಂಡ್‌ಸ್ಕೇಪ್ ಪುಸ್ತಕ ಬಿಡುಗಡೆಯಾಗಲಿದೆ. ಮಣಿಪಾಲ್‌ ವಿವಿಯ ಡೀನ್‌ ಡಾ.ಪದ್ಮರಾಜ ಹೆಗ್ಡೆ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ರತ್ನಮ್ಮ ಪುಸ್ತಕ ಬಿಡುಗಡೆ ಮಾಡಲಿದ್ದರೆ.

ಸಮಾಜದಲ್ಲಿ ವಿಶೇಷ ಚೇತನ ಮಕ್ಕಳ ಬಗ್ಗೆ ಇರುವ ತಪ್ಪು ಕಲ್ಪನೆ ಹಾಗೂ ವಿಶೇಷ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಕಾರ್ಯಾಗಾರದಲ್ಲಿ ಚರ್ಚೆ, ಮಾಹಿತಿ ವಿನಿಮಯ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸುಪರ್ಣ ಶೆಟ್ಟಿ, ಆಸರೆ ಸಂಸ್ಥೆಯ ಜೈ ವಿಠ್ಠಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT