ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಕಳ | ಮಳೆ ಬಿರುಸು: ಅಲ್ಲಲ್ಲಿ ಹಾನಿ

Published 6 ಜುಲೈ 2024, 14:04 IST
Last Updated 6 ಜುಲೈ 2024, 14:04 IST
ಅಕ್ಷರ ಗಾತ್ರ

ಕಾರ್ಕಳ: ತಾಲ್ಲೂಕಿನ ವಿವಿಧೆಡೆ ಮಳೆ ಬಿರುಸಿನಿಂದಾಗಿ ಹಾನಿ ಸಂಭವಿಸಿದೆ.

ತಾಲ್ಲೂಕಿನ ನೀರೆ ಗ್ರಾಮದ ಕಾಲುಸಂಕದ ಅಡಿಯ ಮಣ್ಣು ಸಡಿಲಗೊಂಡು ಸಂಕಕ್ಕೆ ಹಾನಿಯಾಗಿದೆ. ಬೋಳ ಗ್ರಾಮದ ಪಿಲಿಯೂರು ಪದವು ನಿವಾಸಿ ನಾರಾಯಣ ಹರಿಜನ ಅವರ ಮನೆಯ ಚಾವಣಿ ಮಳೆಗೆ ಭಾಗಶಃ ಕುಸಿದು ₹30 ಸಾವಿರ ನಷ್ಟವಾಗಿದೆ.

ಕಣಜಾರು ಗ್ರಾಮದ ಕಲ್ಯಾಣಿ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿ ₹30 ಸಾವಿರ ನಷ್ಟ, ಈದು ಗ್ರಾಮ ನಿವಾಸಿ ಲಲಿತಾ ಅವರ ಅಡಿಕೆ ಕೃಷಿಗೆ ಹಾನಿಯಾಗಿ ₹22 ಸಾವಿರ ನಷ್ಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT