ಬುಧವಾರ, ಜೂನ್ 16, 2021
28 °C

ಶೀರೂರು ಮೂಲ ಮಠದಲ್ಲಿ ಸನ್ಯಾಸ ಸ್ವೀಕಾರ: ಧಾರ್ಮಿಕ ವಿಧಿ ಇಂದಿನಿಂದ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯಡಕ (ಉಡುಪಿ): ಶೀರೂರು ಮಠದ ನೂತನ ಯತಿಯ ಸನ್ಯಾಸ ಸ್ವೀಕಾರ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮವು ಇಲ್ಲಿಗೆ ಸಮೀಪದ ಶೀರೂರು ಮೂಲ ಮಠದಲ್ಲಿ ಮೇ 11ರಿಂದ 14ರವರೆಗೆ ನಡೆಯಲಿದೆ. 

ಶಿರಸಿ ತಾಲ್ಲೂಕಿನ ಸೋಂದಾ ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲು ಸೋದೆ ಮಠಾಧೀಶ ವಿಶ್ವವಲ್ಲಭ ತೀರ್ಥರು ಸಂಕಲ್ಪ ಮಾಡಿದ್ದರು. ಲಾಕ್‌ಡೌನ್ ಮಾರ್ಗಸೂಚಿಯಪಾಲನೆಗೆ, ಈ ಕಾರ್ಯಕ್ರಮವನ್ನು ಶೀರೂರು ಮೂಲ ಮಠಕ್ಕೆ ಸ್ಥಳಾಂತರಿಸಲಾಗಿದೆ.

ಸನ್ಯಾಸಾಶ್ರಮ ಸ್ವೀಕರಿಸಲಿರುವ ವಟುವು ಈಗಾಗಲೇ ಪೋಷಕರ ಜೊತೆಗೆ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ, ದೇವರ ದರ್ಶನ ಪೂರ್ಣಗೊಳಿಸಿದ್ದಾರೆ. ಉಡುಪಿಯ ಅಷ್ಟಮಠದ ಯತಿಗಳ ಆಶೀರ್ವಾದದೊಂದಿಗೆ ಫಲ ಮಂತ್ರಾಕ್ಷತೆ ಸ್ವೀಕರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು