ಭಾನುವಾರ, ಆಗಸ್ಟ್ 1, 2021
21 °C

ಹಣವಿದ್ದ ಬ್ಯಾಗ್ ಪತ್ತೆ ಹಚ್ಚಿ ಒಪ್ಪಿಸಿದ ಆರ್‌ಪಿಎಫ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಪ್ರಯಾಣಿಕರ ಹಣವಿದ್ದ ಬ್ಯಾಗ್‌ ಅನ್ನು ಕೊಂಡೊಯ್ದಿದ್ದ ಸಹ ಪ್ರಯಾಣಿಕನನ್ನು ಪತ್ತೆ ಹಚ್ಚಿದ ಉಡುಪಿ ಆರ್‌ಪಿಎಫ್ ಪೊಲೀಸರು ಮಾಲೀಕರಿಗೆ ಮರಳಿ ಬ್ಯಾಗ್‌ ಒಪ್ಪಿಸಿದ್ದಾರೆ.

ಜೂನ್ 17ರಂದು ಎಸ್‌–2 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಗುಣಶೇಖರ ಎಂಬುವರ ಬ್ಯಾಗ್ ನಾಪತ್ತೆಯಾಗಿತ್ತು. ಬ್ಯಾಗ್‌ನಲ್ಲಿ ₹ 70,000 ನಗದು ಹಾಗೂ ಇತರೆ ವಸ್ತುಗಳಿದ್ದವು. ಈ ಸಂಬಂಧ ಗುಣಶೇಖರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಆರ್‌ಪಿಎಫ್‌ ಸಿಬ್ಬಂದಿ, ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮೂರು ಗುಂಪುಗಳು ಕಪ್ಪುಬಣ್ಣದ ಬ್ಯಾಗ್‌ಗಳನ್ನು ಕೊಂಡೊಯ್ದಿರುವುದು ಗಮನಕ್ಕೆ ಬಂದಿತ್ತು.

ಪ್ರಯಾಣಿಕರ ಕಾರಿನ ನಂಬರ್ ಆಧಾರದ ಮೇಲೆ ಅವರ ಮೊಬೈಲ್ ನಂಬರ್ ಪಡೆದು ಸಂಪರ್ಕಿಸಿದಾಗ ಆಕಸ್ಮಿಕವಾಗಿ ಹೆಚ್ಚುವರಿ ಬ್ಯಾಗ್‌ ಕೊಂಡೊಯ್ದಿರುವುದಾಗಿ ವಸಂತ ಪೂಜಾರಿ ಎಂಬುವರು ತಿಳಿಸಿದರು. ಕಾಪುವಿನಲ್ಲಿ ಕ್ವಾರಂಟೈನ್‌ನಲ್ಲಿದ್ದ ಅವರು ಜುಲೈ 8ರಂದು ಬ್ಯಾಗ್ ಮರಳಿಸಿದ್ದು, ಗುಣಶೇಖರ್ ಅವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಆರ್‌ಪಿಎಫ್ ಸಿಬ್ಬಂದಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.