ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಾವರ ರುಡ್ಸೆಟ್ ಸ್ವ–ಉದ್ಯೋಗ ತರಬೇತಿ ಸಂಸ್ಥೆ: ನಿರುದ್ಯೋಗಿಗಳಿಗೆ ಆಶಾಕಿರಣ

Published 23 ಮೇ 2023, 19:50 IST
Last Updated 23 ಮೇ 2023, 19:50 IST
ಅಕ್ಷರ ಗಾತ್ರ

ಬ್ರಹ್ಮಾವರ: ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಕಿರು ಉದ್ಯಮವನ್ನು ಕೈಗೊಳ್ಳಲು ಹಾಗೂ ಆ ಬಗ್ಗೆ ತರಬೇತಿ ನೀಡುತ್ತಿರುವ ರುಡ್‌ಸೆಟ್‌ ಸಂಸ್ಥೆ ಬ್ರಹ್ಮಾವರದಲ್ಲಿ 1988 ಅಗಸ್ಟ್‌ನಲ್ಲಿ ಪ್ರಾರಂಭವಾಗಿ ಸಾವಿರಾರು ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿಯನ್ನು ನೀಡಿ ಅವರ ಬದುಕನ್ನು ಯಶಸ್ವಿಯಾಗಿ ಮುನ್ನಡೆಸಲು ದಾರಿ ಮಾಡಿ ಕೊಡುತ್ತಿದೆ.

ಸಂಸ್ಥೆ ಆರಂಭವಾದಾಗಿನಿಂದ ಇದುವರೆಗೆ 901 ಬ್ಯಾಚ್‌ಗಳಲ್ಲಿ 26,399 ಜನ ತರಬೇತಿ ಪಡೆದಿದ್ದು, ಆದರಲ್ಲಿ 19,361 ಜನ ಸ್ವಉದ್ಯೋಗ ಮಾಡುತ್ತಿರುವುದು ಹೆಮ್ಮೆಯ ವಿಷಯ. 7,318 ಜನರಿಗೆ ಸಾಲ ಸೌಲಭ್ಯ ನೀಡಿದ್ದಾರೆ. ವಿಶೇಷವಾಗಿ ಅಂಗವಿಕಲರಿಗೆ, ಲೈಂಗಿಕ ಕಾರ್ಯಕರ್ತರಿಗೆ ಮುಂಗಳಮುಖಿಯರಿಗೆ ತರಬೇತಿಗಳನ್ನು ಅಭಿವೃದ್ಧಿಪಡಿಸಿ ಸಮಾಜದಲ್ಲಿ ಸಮಾನತೆಯನ್ನು ತರಲು ಈ ಸಂಸ್ಥೆ ತುಂಬಾ ಪ್ರಯತ್ನ ಮಾಡುತ್ತಿರುವುದು ಗಮನಾರ್ಹ.

ಅತ್ಯಂತ ಸುಸಜ್ಜಿತವಾದ ಕಟ್ಟಡ, ಉಚಿತವಾದ ತರಬೇತಿ, ಊಟ, ವಸತಿ ಸೌಲಭ್ಯದ ಜೊತೆಗೆ ಶಿಬಿರಾರ್ಥಿಗಳಿಗೆ ಸಮವಸ್ತ್ರ, ತರಬೇತಿ ಕಿಟ್ ಸೌಲಭ್ಯದ ಜೊತೆಗೆ ನಾಯಕತ್ವ ಕೌಶಲ್ಯ, ಸಂವಹನ ಕೌಶಲ, ಮಾರ್ಕೆಟಿಂಗ್ ಕೌಶಲ, ಸಮಯ ನಿರ್ವಹಣೆ, ಬ್ಯಾಂಕ್, ಸರ್ಕಾರಿ ಸಾಲ ಸೌಲಭ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಜೊತೆಗೆ ಬೆಳಿಗ್ಗೆ ಯೋಗ ಮಾಡಿಸಲಾಗುತ್ತಿದೆ. ಸಂಸ್ಥೆಯಿಂದ ಪ್ರಮಾಣಪತ್ರ, ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಕಲಿಕೆಯ ಪ್ರಮಾಣಪತ್ರ ನೀಡಿ ಸ್ವ ಉದ್ಯೋಗ ಪ್ರಾರಂಭಿಸಲು ಪ್ರೇರೆಪಿಸಲಾಗುತ್ತಿದೆ.

ಕೃಷಿ ಸಂಬಂಧಿತ ತರಬೇತಿಗಳಾದ ಹೈನುಗಾರಿಕೆ, ಎರೆಹುಳ ಗೊಬ್ಬರ ತಯಾರಿಕೆ, ಜೇನು ಕೃಷಿ, ಅಣಬೆ ಬೇಸಾಯ, ಕೋಳಿ ಸಾಕಾಣಿಕೆ, ರಬ್ಬರ್ ಟ್ಯಾಪಿಂಗ್ ಮತ್ತು ಸಂಸ್ಕರಣೆ, ಉತ್ಪನ್ನಗಳಿಗೆ ಸಂಬಂಧಿಸಿದ ತರಬೇತಿ ನೀಡಲಾಗುತ್ತಿದೆ. ಮಹಿಳೆಯರಿಗೆ ಟೈಲರಿಂಗ್, ಹಪ್ಪಳ, ಉಪ್ಪಿನಕಾಯಿ, ಮಸಾಲ ಹುಡಿ, ಫಾಸ್ಟ್ ಫುಡ್, ಕೃತಕ ಅಭರಣಗಳ, ಬೇಕರಿ ಉತ್ಪನ್ನ, ಸೆಣಬು ಉತ್ಪನ್ನ(ಜೂಟ್ ಬ್ಯಾಗ್), ಪೇಪರ್ ಬ್ಯಾಗ್ ಕವರ್, ಬಟ್ಟೆ ಬ್ಯಾಗ್, ಕ್ಯಾಂಡಲ್ ತಯಾರಿಕೆ, ಬ್ಯೂಟಿ ಪಾರ್ಲರ್‌ ನಿರ್ವಹಣೆ, ಮೃದು ಗೊಂಬೆಗಳ ತಯಾರಿಕೆಗೆ ತರಬೇತಿ ನೀಡಲಾಗುತ್ತಿದೆ.

ಇದಲ್ಲದೇ ಸೆಲ್ ಪೋನ್/ಸ್ಮಾಟ್ ಪೋನ್ ಸರ್ವಿಸಿಂಗ್‌, ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ಮತ್ತು ಪಂಪ್‌ ಸೆಟ್ ದುರಸ್ತಿ, ಟಿ.ವಿ ಟೆಕ್ನಿಷಿಯನ್, ರೆಫ್ರೀಜರೇಟರ್,  ಏರ್ ಕಂಡಿಶನರ್ ಸರ್ವೀಸಿಂಗ್‌, ಸಿ.ಸಿ.ಟಿ.ವಿ ಅಳವಡಿಕೆ ಮತ್ತು ರಿಪೇರಿ, ಫೋಟೋಗ್ರಫಿ ಮತ್ತು ವೀಡಿಯೋಗ್ರಾಫಿ, ದ್ವಿ ಚಕ್ರ ವಾಹನಗಳ ದುರಸ್ತಿ ಮತ್ತು ಸರ್ವೀಸಿಂಗ್, ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ, ಕಟ್ಟಡಗಳ ಪೈಂಟಿಂಗ್, ಕಂಪ್ಯೂಟರೈಸ್ ಡ್ ಅಕೌಂಟಿಂಗ್, ಸಾಮಾನ್ಯ ಉದ್ಯಮಶೀಲತಾ ತರಬೇತಿಗಳು, ಗ್ರಾಮೀಣ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ, ಉದ್ಯಮಶೀಲಾಭಿವೃದ್ದಿ ತರಬೇತಿ ಹಾಗೂ ಇನ್ನೂ ಅನೇಕ ತರಬೇತಿಗಹೆಬ್ರಿ: ಅಜೆಕಾರಿನ ಗ್ರಾಮದೇವತೆ ವಿಷ್ಣುಮೂರ್ತಿ ದೇವರಿಗೆ ವರುಣ ದೇವರ ಕೃಪೆಗಾಗಿ ಮಂಗಳವಾರ ಕಾಡುಹೊಳೆ ಯುವ ಶಕ್ತಿ ಯುವಕ ಮಂಡಲ, ಸ್ಫೂರ್ತಿ ಯುವತಿ ಮಂಡಲದ ವತಿಯಿಂದ ಅರ್ಚಕ ವೇದಮೂರ್ತಿ ಶ್ರೀಕಾಂತ್‌ ಭಟ್‌ ನೇತ್ರತ್ವದಲ್ಲಿ ಕ್ಷೀರಾಭಿಷೇಕ ನಡೆಯಿತು. ಗ್ರಾಮಸ್ಥರು ಭಾಗವಹಿಸಿದ್ದರು.ಳನ್ನು ಸಂಸ್ಥೆಯಿಂದ ನೀಡಲಾಗುತ್ತಿದೆ.

ಕರ್ನಾಟಕದ ಉಜಿರೆಯಲ್ಲಿ 1982ರಲ್ಲಿ ರುಡ್ ಸೆಟ್ ಗಳ ಪರಿಕಲ್ಪನೆಯು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಸಹಯೋಗದೊಂದಿಗೆ (ಈಗ ಕೆನರಾ ಬ್ಯಾಂಕ್) ಪ್ರಾರಂಭವಾಗಿ ಅತ್ಯಂತ ಯಶಸ್ವಿಯಾಗಿ ಮುಂದುವರಿದುಕೊಂಡು ಸಂಸ್ಥೆಯ ಕಾರ್ಯಚಟುವಟಿಕೆಗೆ 2012-2013 ರಿಂದ ಸತತವಾಗಿ ಭಾರತ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದ ಎಎ ಮಾನ್ಯತೆ ಪಡೆದಿದ್ದೆ.

ಸಂಸ್ಥೆಯ ಬಗ್ಗೆ ಮಾಹಿತಿಗೆ 52ನೇ ಹೇರೂರು, ಬ್ರಹ್ಮಾವರ-ಉಡುಪಿ-576213 ಅಥವಾ 0820-2563455, 9449862808 ಕರೆ ಮಾಡಿ ತಿಳಿದುಕೊಳ್ಳಬಹುದು.

ವೆಬ್‌ಸೈಟ್‌: www.rudsetitraining.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT