ಪಡುಬಿದ್ರಿ: ಶ್ರಾವಣ ಹುಣ್ಣಿಮೆಯ ವಿಶೇಷ ದಿನದ ಅಂಗವಾಗಿ ಊರಿನ ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯದಂತೆ ಕಾಪು ತಾಲ್ಲೂಕಿನ ಸಮುದ್ರ ತೀರದಲ್ಲಿ ಶನಿವಾರ ‘ಸಮುದ್ರ ಪೂಜೆ’ ನೆರವೇರಿಸಲಾಯಿತು.

ಹೆಜಮಾಡಿ, ಪಡುಬಿದ್ರಿ, ಎರ್ಮಾಳು ತೆಂಕ, ಉಚ್ಚಿಲ ಬಡಾ, ಕಾಪುವಿನಲ್ಲಿ ಮೀನುಗಾರರು, ಮೊಗವೀರ ಸಂಘಟನೆಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸಮುದ್ರಕ್ಕೆ ಹಾಲು, ಪುಷ್ಪ, ತೆಂಗಿನಕಾಯಿ ಸಮರ್ಪಿಸಿದರು.

ಹೆಜಮಾಡಿ ಏಳೂರು ಮೊಗವೀರ ಮಹಾಸಭಾದ ವತಿಯಿಂದ ಹೆಜಮಾಡಿ ಅಮವಾಸ್ಯೆ ಕರಿಯ ಬಳಿ ಸಮದ್ರಕ್ಕೆ ಹಾಲೆರೆದು ಪೂಜೆ ಸಲ್ಲಿಸಲಾಯಿತು. ಹೆಜಮಾಡಿ ವೀರ ಮಾರುತಿ ಮಂದಿರದಿಂದ ಭಜನಾ ಮೆರವಣಿಗೆಯೊಂದಿಗೆ ಹೆಜಮಾಡಿ ಅಮಾಸೆ ಕರಿಯ ಸಮುದ್ರ ಕಿನಾರೆಗೆ ಬಂದು ಮತ್ಸ್ಯ ಸಮೃದ್ಧಿ, ಉತ್ತಮ ಫಲಕ್ಕೆ ಮತ್ತು ಮೀನುಗಾರಿಕೆ ಸಂದರ್ಭ ಸಮಸ್ಯೆ ಉಂಟಾಗದಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಕಾಣಿಕೆ ಸಮರ್ಪಿಸಿದರು.

ಹೆಜಮಾಡಿ ಏಳೂರು ಮೊಗವೀರ ಮಹಸಭಾ ಅಧ್ಯಕ್ಷ ದಿವಾಕರ ಹೆಜ್ಮಾಡಿ, ಉಪಾಧ್ಯಕ್ಷ ಬಾಲಕೃಷ್ಣ ಸುವರ್ಣ, ಕಾರ್ಯದರ್ಶಿ ಲಲಿತ್ ಕುಮಾರ್, ಖಜಾಂಚಿ ಶ್ರೇಯಸ್ ಸಾಲ್ಯಾನ್, ಹದಿನಾರುಪಟ್ಣ ಮೊಗವೀರ ಸಭಾ ಅಧ್ಯಕ್ಷ ಎಚ್. ರವಿ ಕುಂದರ್, ಕಾರ್ಯದರ್ಶಿ ಸುಧಾಕರ ಕರ್ಕೇರ, ದ.ಕ. ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಹಿರಿಯರಾದ ನಾರಾಯಣ ಮೆಂಡನ್, ಕನ್ನಂಗಾರು ಮೊಗವೀರ ಸಭಾದ ಅಧ್ಯಕ್ಷ ಕುಮಾರ್ ಕುಂದರ್, ಏಳೂರು ಗ್ರಾಮ ಸಭೆಗಳ ಅಧ್ಯಕ್ಷರು, ಗುರಿಕಾರರು, ಮಹಿಳಾ ಸಭೆಗಳ ಪದಾಧಿಕಾರಿಗಳು, ಗ್ರಾಮ ವ್ಯಾಪ್ತಿಯ ಮೀನುಗಾರರು ಭಾಗವಹಿಸಿದ್ದರು.

ಪಡುಬಿದ್ರಿ ಮೊಗವೀರ ಮಹಾಸಭಾದಿಂದ ಸಮುದ್ರಪೂಜೆ

ಪಡುಬಿದ್ರಿ ಮೊಗವೀರ ಮಹಾಸಭಾ ವತಿಯಿಂದ ಅಧ್ಯಕ್ಷ ಅಶೋಕ ಸಾಲ್ಯಾನ್ ನೇತೃತ್ವದಲ್ಲಿ ಸಮುದ್ರಕ್ಕೆ ಹಾಲೆರೆಯಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾ ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್ ಕಾರ್ಯದರ್ಶಿ ಸಂತೋಷ್ ಪಡುಬಿದ್ರಿ ಖಜಾಂಚಿ ಅಶೋಕ್ ಬಂಗೇರ ಜೊತೆ ಕಾರ್ಯದರ್ಶಿ ಸತೀಶ್ ಸಾಲ್ಯಾನ್ ಪಾಲ್ಗೊಂಡಿದ್ದರು. ಕಾಪುವಿನಲ್ಲಿ ಕಾಪು ಮೊಗವೀರ ಮಹಾಸಭಾ ಪೊಲಿಪು ಮೊಗವೀರ ಮಹಾಸಭಾ ಕೈಪುಂಜಾಲು ಮೊಗವೀರ ಮಹಾಸಭಾದ ವತಿಯಿಂದ ಸಮುದ್ರ ಪೂಜೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.