ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರಾಚಾರ್ಯರ ಧರ್ಮ ನಿಷ್ಠೆ, ಶೃದ್ಧೆ ಅನನ್ಯವಾದುದು: ಕೆ.ಎಸ್.ಕಾರಂತ

ಸಾಲಿಗ್ರಾಮದಲ್ಲಿ ಶಂಕರ ಜಯಂತಿ ಉತ್ಸವಕ್ಕೆ ಕೆ.ಎಸ್.ಕಾರಂತ ಚಾಲನೆ
Published 9 ಮೇ 2024, 13:08 IST
Last Updated 9 ಮೇ 2024, 13:08 IST
ಅಕ್ಷರ ಗಾತ್ರ

ಸಾಲಿಗ್ರಾಮ(ಬ್ರಹ್ಮಾವರ): ‘ಶಂಕರಾಚಾರ್ಯರ ಧರ್ಮ ನಿಷ್ಠೆ, ಶ್ರದ್ಧೆ, ಭಕ್ತಿ ಹಾಗೂ ಛಲ ಅನನ್ಯವಾದುದು. ಅವುಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಅಳವಡಿಸಿಕೊಳ್ಳುವಂತೆ ಮಾರ್ಗದರ್ಶನ ಮಾಡಬೇಕಾದುದು ಪೋಷಕರ ಕರ್ತವ್ಯ’ ಎಂದು ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಸ್.ಕಾರಂತ ಹೇಳಿದರು.

ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮ ಬ್ರಾಹ್ಮಣ ಮಹಾಸಭಾ ಹಾಗೂ ಉಡುಪಿ ಜಿಲ್ಲಾ ಶಾಂಕರತತ್ವ ಪ್ರಚಾರ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಶಂಕರ ಜಯಂತಿ ಉತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿದರು.

ಉಡುಪಿ ಜಿಲ್ಲಾ ಶಾಂಕರತತ್ವ ಪ್ರಚಾರ ಸಮಿತಿಯ ಸಹ ಸಂಚಾಲಕಿ ಸವಿತಾ ಎರ್ಮಾಳ್, ಗಾಯತ್ರಿ ಮಂತ್ರದ ವಿಶೇಷತೆ ತಿಳಿಸಿದರು.

ವೇದಮೂರ್ತಿ ಸೂರಾಲು ದೇವೀಪ್ರಸಾದ ತಂತ್ರಿ ಮಾತನಾಡಿ, ‘ಶಂಕರಾಚಾರ್ಯರು ಎಳವೆಯಲ್ಲೇ ಮೈಗೂಡಿಸಿಗೊಂಡ ಸನಾತನ ಹಿಂದೂ ಧರ್ಮವನ್ನು ಪುನರ್ ಸಂಘಟಿಸುವಲ್ಲಿ ನಡೆಸಿದ ಪ್ರಯತ್ನಗಳು, ಭರತಖಂಡದಾದ್ಯಂತ ಸನಾತನ ವೈದಿಕ ಸಂಸ್ಕೃತಿ ಭದ್ರಗೊಳಿಸುವಲ್ಲಿ ಶಂಕರರು ಕಾರ್ಯತತ್ಪರರಾದ ರೀತಿ ವಿವರಿಸುತ್ತಾ, ಸನಾತನ ಹಿಂದೂ ಧರ್ಮ ಮತ್ತು ಸಂಸ್ಕೃತಿ ಆಚರಣೆಗಳ ಬಗ್ಗೆ ಕೀಳರಿಮೆ ಸಲ್ಲದು’ ಎಂದು ಹೇಳಿದರು.

ಸಾಲಿಗ್ರಾಮ ವಲಯ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಂ.ಶಿವರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪಟ್ಟಾಭಿರಾಮ ಸೋಮಯಾಜಿ ಸ್ವಾಗತಿಸಿದರು. ಸಭಾದ ಕಾರ್ಯದರ್ಶಿ ಕೆ.ರಾಜಾರಾಮ ಐತಾಳ ನಿರೂಪಿಸಿ, ವಂದಿಸಿದರು. ವಸಂತ ವೇದ ಶಿಬಿರದ 400ಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT