ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರು–ಆಟೊ ಡಿಕ್ಕಿ: ಮಹಿಳೆ ಮೃತ್ಯು

Published 13 ಜೂನ್ 2024, 14:41 IST
Last Updated 13 ಜೂನ್ 2024, 14:41 IST
ಅಕ್ಷರ ಗಾತ್ರ

ಶಿರ್ವ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳೆ ಗ್ರಾಮದ ಪಡುಬೆಳ್ಳೆಯ ಪಾಜಕ ದ್ವಾರದ ಬಳಿ ಬುಧವಾರ ಕಾರ್‌ ಮತ್ತು ಆಟೊರಿಕ್ಷಾ ಡಿಕ್ಕಿಯಾಗಿ ಆಟೊ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ.

ಸುಭಾಸ್ ನಗರದ ನಿವಾಸಿ ಆಗ್ನೆಸ್ ನೊರೊನ್ಹ (76) ಮೃತಪಟ್ಟವರು. ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಟೊ ಚಾಲಕ ಸುರೇಶ್ ಪೂಜಾರಿ, ಕಾರ್‌ ಪ್ರಯಾಣಿಕ ದಾನಪ್ಪ ರಾಥೋಢ್ ಗಾಯಗೊಂಡಿದ್ದಾರೆ. ಆಗ್ನೆಸ್ ಅವರ ಅಕ್ಕನ ಮಗಳು ಜೆಸಿಂತಾ ಮಿನೇಜಸ್ ಅಪಾಯದಿಂದ ಪಾರಾಗಿದ್ದಾರೆ.

ಕಾರು ಡಿಕ್ಕಿಯಾದ ರಭಸಕ್ಕೆ ರಿಕ್ಷಾ ಚಾಲಕ ಸೇರಿದಂತೆ ಪ್ರಯಾಣಿಕರು ಹೊರಗಡೆ ಎಸೆಯಲ್ಪಟ್ಟಿದ್ದರು. ಅಪಘಾತಕ್ಕೆ ಕಾರ್‌ ಚಾಲಕ ಮನೋಜ್ ಎಂಬುವರ ಅಜಾಗರೂಕತೆಯೇ ಕಾರಣ ಎನ್ನಲಾಗಿದೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT