ಶಿರ್ವ: ಕರಾವಳಿಯ ಜಿಲ್ಲೆಗಳಲ್ಲಿ ಅತಿ ಮಳೆಯಾದರೆ ಅದರ ಪರಿಣಾಮ ಮೀನುಗಾರಿಕೆಯ ಮೇಲೆ ತಟ್ಟುತ್ತದೆ. ಮಳೆಗಾಲದ ಜೀವನೋಪಾಯದ ನಾಡದೋಣಿ ಮೀನುಗಾರರಿಗೆ ಅತಿ ಮಳೆಯಿಂದಾಗಿ ಕಸುಬಿಲ್ಲದಂತಾಗಿದೆ.

ಕಡಲ ಮಕ್ಕಳ ಮಳೆಗಾಲದ ನಾಡದೋಣೆ ಮೀನುಗಾರಿಕೆಗೆ ಮತ್ತೆ ತಡೆಯುಂಟಾಗಿದೆ. ಕಡಲ ನಡುವೆ ತೀವ್ರ ಬಿರುಗಾಳಿ ಎದ್ದಿರುವ ಕಾರಣ ಕಟಪಾಡಿ ಮಟ್ಟು, ಉದ್ಯವಾರ ಪಡುಕರೆ ಸಮೀಪ ಮೀನುಗಾರರು ನಾಡದೋಣಿ ಮೀನುಗಾರಿಕೆಗೆ ಭಾನುವಾರ ಬ್ರೇಕ್ ನೀಡಿದ್ದಾರೆ.

ಮಳೆಗಾಲದಲ್ಲಿ ಆಗಾಗ ಕಂಡು ಬರುತ್ತಿರುವ ಹವಾಮಾನ ವೈಪರೀತ್ಯದಿಂದಾಗಿ ಮೀನುಗಾರರಿಗೆ ನಷ್ಟ ಉಂಟಾಗಿದೆ. ಪ್ರಾರಂಭದಿಂದಲೂ ಈ ಬಾರಿ ಮಳೆಗಾಲದ ಮೀನುಗಾರಿಕೆಗೆ ಪೂರಕ ವಾತವರಣ ನಿರ್ಮಾಣವಾಗದೆ ಒಂದು ತಿಂಗಳ ಮೀನುಗಾರಿಕೆಗೆ ಕುತ್ತು ಬಂದಿತ್ತು. ಇದೀಗ ಮತ್ತೆ ಮಳೆಗಾಳಿಯಿಂದ ಸಮುದ್ರ ಉಕ್ಕೇರಿರುವ ಕಾರಣ ಮೀನುಗಾರಿಕೆಗೆ ತಾತ್ಕಾಲಿಕ ತಡೆಯುಂಟಾಗಿದೆ. ಇದೇ ಪರಿಸ್ಥಿತಿ ಮತ್ತೆ ಎದುರಾದಲ್ಲಿ ನಾಡದೋಣಿ ಮೀನುಗಾರರು ಸಂಪಾದನೆ ಇಲ್ಲದೆ ತೀರ್ವ ಆರ್ಥಿಕ ಸಂಕಷ್ಟ ಎದುರಿಸಬೇಕಾಗಬಹುದು ಎನ್ನುತ್ತಾರೆ ಮೀನುಗಾರ ನಾಗೇಶ್ ತಿಂಗಳಾಯ ಮಟ್ಟು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.