ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ತರಗತಿಗೆ ಹಾಜರಾತಿ ಹೆಚ್ಚಳ

12,238 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಜರು
Last Updated 11 ಜನವರಿ 2021, 13:59 IST
ಅಕ್ಷರ ಗಾತ್ರ

ಉಡುಪಿ: ವರ್ಷಾರಂಭದಿಂದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿದ್ದು, ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಏರಿಕೆಯಾಗುತ್ತಿದೆ. 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಆರಂಭವಾಗಿರುವ ವಿದ್ಯಾಗಮ ಕಾರ್ಯಕ್ರಮವೂ ಸುಗಮವಾಗಿ ನಡೆಯುತ್ತಿದೆ.

ಸೋಮವಾರ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪಡೆದಿರುವ 6,026 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪೈಕಿ 5,382 ತರಗತಿಗೆ ಹಾಜರಾಗಿದ್ದರು. ಅನುದಾನಿತ ಶಾಲೆಗಳಲ್ಲಿ ದಾಖಲಾಗಿರುವ 3,166 ವಿದ್ಯಾರ್ಥಿಗಳಲ್ಲಿ 2,590 ಮಕ್ಕಳು ಹಾಜರಾದರೆ, ಖಾಸಗಿ ಶಾಲೆಗಳಲ್ಲಿ ಓದುತ್ತಿರುವ 5,899 ವಿದ್ಯಾರ್ಥಿಗಳ ಪೈಕಿ 4,903 ಮಕ್ಕಳು ತರಗತಿಗೆ ಬಂದು ಪಾಠ ಕೇಳಿದರು.

ಸಧ್ಯ 6 ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಯ ಅಂಗಳದಲ್ಲಿ ವಿದ್ಯಾಗಮ ಕಾರ್ಯಕ್ರಮ ನೆಡೆಯುತ್ತಿದ್ದು, ಸರ್ಕಾರಿ ಶಾಲೆಗಳ 12,343 ವಿದ್ಯಾರ್ಥಿಗಳಲ್ಲಿ 9,602 ಮಕ್ಕಳು ಹಾಜರಾಗಿದ್ದರು. ಅನುದಾನಿತ ಶಾಲೆಗಳ 5,672 ವಿದ್ಯಾರ್ಥಿಗಳಲ್ಲಿ 3,981 ಹಾಗೂ ಖಾಸಗಿ ಶಾಲೆಗಳ 12,735 ವಿದ್ಯಾರ್ಥಿಗಳಲ್ಲಿ 7,000 ಮಕ್ಕಳು ವಿದ್ಯಾಗಮದಲ್ಲಿ ಪಾಠ ಪ್ರವಚನಗಳನ್ನು ಆಲಿಸಿದರು.

ಪಿಯುಸಿ ಹಾಜರಾತಿ ವಿವರ:ದ್ವಿತೀಯ ಪಿಯುಸಿ ಕಲಾ ಮಾಧ್ಯಮದಲ್ಲಿ ಓದುತ್ತಿರುವ 1,582 ವಿದ್ಯಾರ್ಥಿಗಳಲ್ಲಿ 1,259, ವಾಣಿಜ್ಯ ವಿಭಾಗದ 7,899 ವಿದ್ಯಾರ್ಥಿಗಳಲ್ಲಿ 6427, ವಿಜ್ಞಾನ ವಿಭಾಗದ 5428 ವಿದ್ಯಾರ್ಥಿಗಳ ಪೈಕಿ 4,552 ಮಂದಿ ತರಗತಿಗೆ ಹಾಜರಾಗಿದ್ದರು. ಮೂರು ವಿಭಾಗಗಳ 14,317 ವಿದ್ಯಾರ್ಥಿಗಳಲ್ಲಿ 12,238 ಮಕ್ಕಳು ಕಾಲೇಜುಗಳಿಗೆ ಬಂದು ಪಾಠ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT