ಬುಧವಾರ, ಸೆಪ್ಟೆಂಬರ್ 18, 2019
28 °C

ಎಲ್‌ಇಟಿ ಉಗ್ರರು ತಮಿಳುನಾಡು ಪ್ರವೇಶಿಸಿರುವ ಶಂಕೆ: ಕರಾವಳಿಯಲ್ಲಿ ಕಟ್ಟೆಚ್ಚರ

Published:
Updated:

ಉಡುಪಿ: ಲಷ್ಕರ್‌ ಇ ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ 6 ಜನರ ತಂಡ ತಮಿಳುನಾಡು ಪ್ರವೇಶಿಸಿರುವ ಮಾಹಿತಿ ಇದ್ದು, ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕರಾವಳಿ ಕಾವಲು ಪಡೆ ಪೊಲೀಸರು ಪಾಕಿಸ್ತಾನದ ಉಗ್ರನ ಚಿತ್ರ ಹಾಗೂ ವಿವರಗಳನ್ನೊಳಗೊಂಡಿರುವ ನೋಟಿಸ್‌ಗಳನ್ನು ಮಲ್ಪೆ ಬಂದರು, ಪಡುಕೆರೆ ಬೀಚ್‌, ಕೆಮ್ಮಣ್ಣು, ಹೂಡೆ ಪ್ರದೇಶಗಳಲ್ಲಿ ಅಂಟಿಸಿದ್ದಾರೆ.

6 ಜನ ಉಗ್ರರಲ್ಲಿ ಒಬ್ಬ ಪಾಕಿಸ್ತಾನದ ಉಗ್ರನಾಗಿದ್ದು, ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಲಾಗಿದೆ. ಶಂಕಿತರು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಇದೇವೇಳೆ ನಗರದ ಪ್ರಮುಖ ಸ್ಥಳಗಳು, ಬಂದರು ಹಾಗೂ ಪ್ರವಾಸಿ ತಾಣಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ಎಂದು ಎಸ್‌ಪಿ ನಿಶಾ ಜೇಮ್ಸ್‌ ತಿಳಿಸಿದ್ದಾರೆ.

Post Comments (+)